September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಾಯ೯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಂದ ಭಜನಾ ಸಂಕೀರ್ತನೆ

ಬಾಯ೯: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀ ರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆಯನ್ನು ಇಡೀ ವಿಶ್ವವೇ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ದೇಶವಿದೇಶಗಳಲ್ಲಿ ಹೋಮ ಹವನ ಯಜ್ಞಾಧಿ ಕಾರ್ಯಗಳು ನಡೆದು ರಾಷ್ಟ್ರಮಂದಿರ ಲೋಕಾರ್ಪಣೆಯನ್ನು ಕಣ್ತುಂಬಿಕೊಂಡ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಬಾರ್ಯದಲ್ಲಿ ಕೂಡ ದೇವರಿಗೆ ವಿಶೇಷ ಪೂಜೆ ಹಾಗೂ ಊರ ಭಕ್ತರಿಂದ ಮತ್ತು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಹೊಸಮುಗ್ರು ತೆಕ್ಕಾರು ಇವರಿಂದ ಭಜನಾ ಸಂಕೀರ್ತನೆ , ಅನ್ನಸಂತರ್ಪಣೆ ನಡೆಯಿತು.


ತೆಕ್ಕಾರು, ಬಾರ್ಯ, ಪುತ್ತಿಲ ಗ್ರಾಮದ ಭಕ್ತರು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಂದರ ನೂರಿತ್ತಾಯ, ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಪರಂ‌‌ರ್ದ ಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪೈ, ಟ್ರಸ್ಟ್ ಪ್ರಮುಖರಾದ ಪ್ರಮೀಳಾ, ಶಿವರಾಮ, ನಾರಾಯಣ ಗೌಡ ಹಾಗೂ ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರವೀಣ್ ರೈ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಸಿಬ್ಬಂದಿ ವರ್ಗ, ಸೇಸಪ್ಪ ಸಾಲ್ಯಾನ್, ಚೇತನ್ ಅದಮ, ಸುದರ್ಶನ್, ಗಣೇಶ್ ಕುಲಾಲ್, ಅರುಣ ಬಜೆಕಳ, ರಾಮಣ್ಣ ಗೌಡ, ಪ್ರಮೋದ್, ದಯಾನಂದ್ , ದಯಾಯಂತಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಳದಂಗಡಿ ಸ.ಪ.ಪೂ. ಕಾಲೇಜಿಗೆ ಕಂಪ್ಯೂಟರ್ ಸ್ಮಾರ್ಟ್ ತರಗತಿ ಉದ್ಘಾಟನೆ

Suddi Udaya

ಮಧ್ವ ಯಕ್ಷಕೂಟ ಮಡಂತ್ಯಾರು ವಲಯ ಸಮಿತಿ ಉದ್ಘಾಟನೆ: ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ

Suddi Udaya

ಹಿಂದೂ ಸಂರಕ್ಷಣಾ ಯಾತ್ರೆ ಬಗ್ಗೆ ಹಾಕಿದ ಎರಡು ಬ್ಯಾನರ್ ಹರಿದ ಕಿಡಿಗೇಡಿಗಳು

Suddi Udaya

ಶಿಶಿಲ: ವೈಕುಂಠಪುರ ನಿವಾಸಿ ಕುಂಞ ಮಲೆಕುಡಿಯ ನಿಧನ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಸ್ತೆ ಕೆಸರುಮಯ: ವಾಹನ ಪರದಾಟ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

Suddi Udaya

ಫಾತಿಮಾ ಹೆಲ್ತ್ ಫೌಂಡೇಶನ್, ಇಂಡಿಯಾನ ಆಸ್ಪತ್ರೆಯಿಂದ ಸೇವಾ ಯೋಜನೆಯಿಂದ ಮದ್ದಡ್ಕದಲ್ಲಿ 68 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya
error: Content is protected !!