25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿಯನ್ನು ಸುಳ್ಳು ಪ್ರಕರಣದಲ್ಲಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಹಾಗೂ ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಬೆಳ್ತಂಗಡಿ ಸರ್ಕಲ್‌‌‌ ಇನ್ಸ್ಪೆಕ್ಟರ್ ಅಗಿದ್ದ ಗಂಗ್ಗಿರೆಡ್ಡಿಯನ್ನು ಲಂಚ ಪಡೆದ ಸುಳ್ಳು ಆರೋಪದಲ್ಲಿ ಲೋಕಾಯಕ್ತ ಪೊಲೀಸರಿಗೆ ಟ್ರ್ಯಾಪ್ ಮಾಡಿಸಿದ ದೂರುದಾರ ಇದೀಗ ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಚೆಕ್ ಬೌನ್ಸ್ ಪ್ರಕರಣ: ಬೆಳ್ತಂಗಡಿ ನ್ಯಾಯಲಯದ ಸಿ.ಸಿ ನಂಬ್ರ 118/2021 ಕಲಂ.138 NI Act (ಚೆಕ್ ಬೌನ್ಸ್) ಪ್ರಕರಣದಲ್ಲಿ ವಾರಂಟು ಆರೋಪಿ ಶ್ರೀನಿವಾಸ್ ಪ್ರಸಾದ್(50) ಎಂಬಾತನನ್ನು ಜ.24 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರುಳಿಧರ್ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿ ವ್ರಷಭ ಮತ್ತು ಬಸವರಾಜ್ ರವರು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುನಿಂದ ವಶಕ್ಕೆ ಪಡೆದು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ಬೆಳ್ತಂಗಡಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಟ್ಯಾಪ್ ಪ್ರಕರಣ: ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅಗಿದ್ದ ಗಂಗ್ಗಿರೆಡ್ಡಿ ಅವರನ್ನು ಸುಳ್ಳು ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ ಟ್ರ್ಯಾಪ್ ಮಾಡಿಸಿದ್ದ ದೂರುದಾರ ಶ್ರೀನಿವಾಸ್ ಪ್ರಸಾದ್. ಮಂಗಳೂರು ನ್ಯಾಯಾಲಯ ಇನ್ಸ್ಪೆಕ್ಟರ್ ಅವರ ಆರೋಪ ಸಾಭಿತಾಗಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದರು. ನಂತರ 2022 ರಲ್ಲಿ ಹೈಕೋರ್ಟ್ ನಲ್ಲಿ ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿ ಅವರ ಆರೋಪ ಪ್ರಕರಣ ಸುಳ್ಳು ಎಂದು ರದ್ದಾಗಿತ್ತು. ಇದೀಗ ಇನ್ಸ್ಪೆಕ್ಟರ್ ಗಂಗ್ಗಿರೆಡ್ಡಿ ಗುಪ್ತಚರ ಇಲಾಖೆಯಿಂದ ಕರ್ತವ್ಯದಿಂದ ನಿವೃತ್ತ ರಾಗಿದ್ದಾರೆ.

Related posts

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ರೈತಮೋರ್ಚಾದ ಸಭೆ

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿರ್ಲಾಲು ಗ್ರಾ.ಪಂ. ನಲ್ಲಿ ಪ್ರತಿಭಟನೆ: ಸರಕಾರಕ್ಕೆ ಮನವಿ

Suddi Udaya

ನೆರಿಯ: ಕೋಲೋಡಿ ತೋಡಿಗೆ ಪೈಪ್ ಮೋರಿ ಅಳವಡಿಕೆ: ಭರವಸೆ ಈಡೇರಿಸಿದ ರಕ್ಷಿತ್ ಶಿವರಾಂ

Suddi Udaya

ಮುಂಡಾಜೆ: ಚರಂಡಿಗೆ ಜಾರಿದ ಆಹಾರ ಉತ್ಪನ್ನಗಳ ಸಾಗಾಟದ ವಾಹನ

Suddi Udaya

ಮುಂಡಾಜೆ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!