April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಪ್ರೌಢಶಾಲೆಯಲ್ಲಿ ಕುಮಾರವ್ಯಾಸ ನಮನ, ಮುದ್ದಣ ಸ್ಮರಣೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಕುಮಾರವ್ಯಾಸ ನಮನ ಮತ್ತು ಕವಿ ಮುದ್ದಣರವರ ಸ್ಮರಣೆಯ ಕಾರ್ಯಕ್ರಮ ಜರಗಿತು.

ಆರಂಭದಲ್ಲಿ ಈರ್ವರು ಕವಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಅನಂತರ ಕುಮಾರವ್ಯಾಸನ ಕವಿಕಾವ್ಯ ಪರಿಚಯದಲ್ಲಿ ಕುಮಾರವ್ಯಾಸನ ಪರಿಚಯವನ್ನು ಸುಕನ್ಯಾ ಹತ್ತನೇ ತರಗತಿ, ಮುದ್ದಣ ಪರಿಚಯವನ್ನು ಸೃಷ್ಟಿ ಎಂಟನೇ ತರಗತಿ, ಮುದ್ದಣ ಮನೋರಮೆಯರ ಸಂಭಾಷಣೆಯ ಕಾವ್ಯ ಭಾಗದ ಪ್ರಸ್ತುತಿಯನ್ನು ತೃಷಾ ಜೈನ್ ಮತ್ತು ಸಂಶಿಯ ಎಂಟನೇ ತರಗತಿ ಹಾಗೂ ಕುಮಾರವ್ಯಾಸ ಭಾರತದ ಆಯ್ದ ಕಾವ್ಯ ಭಾಗದಿಂದ ವಾಚನ ಪ್ರವಚನ ಗಮಕ ಕಾರ್ಯಕ್ರಮವನ್ನು ಹತ್ತನೇ ತರಗತಿಯ ಅಮೂಲ್ಯ ಮತ್ತು ಕಿರ್ತನಾ ನಡೆಸಿಕೊಟ್ಟರು.

ಶಿಕ್ಷಕರಾದ ಸುಮನ್ ರವರ ಮಾರ್ಗದರ್ಶನದಲ್ಲಿ ಜರಗಿದ ಈ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದ ಎಂಟನೇ ತರಗತಿಯ ಶ್ರೇಯಸ್ ಸ್ವಾಗತಿಸಿ, ವಂದಿಸಿದರು.

Related posts

ಉಜಿರೆ ಗ್ರಾ.ಪಂ. ಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಭೇಟಿ

Suddi Udaya

ಧರ್ಮಸ್ಥಳದಲ್ಲಿ “ಕೆಸರ್‌ಡ್ ಒಂಜಿ ದಿನ”

Suddi Udaya

ಉಜಿರೆ:ಓಷಿಯಾನ್ ಪರ್ಲ್ ಗೆ ಹರ್ಷ ಗುಪ್ತ ಬೇಟಿ

Suddi Udaya

ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ

Suddi Udaya

ಜು.19: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಸ್ಮಿತೇಶ್ ಎಸ್ ಬಾರ್ಯರವರಿಗೆ ರಾಜ್ಯ ಯುವ ಪ್ರಶಸ್ತಿ – 2025

Suddi Udaya
error: Content is protected !!