ಬಳಂಜ: ಇಲ್ಲಿಯ ನಾಲ್ಕೂರು ಬಾಕಿಮಾರು ಗದ್ದೆ ಕುರೆಲ್ಯ ಗುತ್ತುವಿನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಸೇವಾ ಬಯಲಾಟ ಜ.24 ರಂದು ನಡೆಯಿತು.
ಬರೆಮೇಲು ಜಯಂತ ಭಟ್ ಇವರ ಮನೆಯಿಂದ ಶ್ರೀದೇವರ ವೈಭವೋಪೇತ ಮೆರವಣಿಗೆ ಹೊರಟು, ಕುರೆಲ್ಯ ಗುತ್ತು ಬಾಕಿಮಾರು ಗದ್ದೆಯಲ್ಲಿ ಚೌಕಿ ಪೂಜೆ , ಶ್ರೀ ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಸೇವಾ ಬಯಲಾಟ ನಡೆಯಿತು.
ಯಕ್ಷಗಾನ ಕಲಾವಿದ ರಾಜ್ಯ ಪ್ರಶಸ್ತಿ ವಿಜೇತ ಕೊರಗಪ್ಪ ಶೆಟ್ಟಿ ಅರ್ವ, ಯಕ್ಷಗಾನ ಕಲಾವಿದ ಶ್ರೀಧರ ಭಟ್ ನಾಲ್ಕೂರು ಇವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್ದಡ್ಕ, ಕುರೆಲ್ಯಗುತ್ತು ಮನೆತನದ ಹಿರಿಯರಾದ ನೋಣಯ್ಯ ಶೆಟ್ಟಿ, ತುಳು ಸಾಹಿತ್ಯ ಅಕಾಡಮಿ ಸದಸ್ಯ ರವೀಂದ್ರ ಶೆಟ್ಟಿ ಬಳಂಜ, ಬಳಂಜ ಗ್ರಾ.ಪಂ ಸದಸ್ಯ ಜಯ ಶೆಟ್ಟಿ ಪಾದೆ , ಸುರೇಂದ್ರ ಶೆಟ್ಟಿ ಕುರೆಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರ ಪರವೂರ ಸಾವಿರಾರು ಭಕ್ತರು, ವಿವಿಧ ಕ್ಷೇತ್ರದ ಗಣ್ಯರು ನೆರೆದಿದ್ದರು. ದೇವರ ಪ್ರಸಾದ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.