September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತುರ್ತು ಸ್ಪಂದನೆ: ನಡ ಸ.ಹಿ.ಪ್ರಾ. ಶಾಲೆಯ ಮೇಲ್ಛಾವಣಿ ದುರಸ್ಥಿ ಕಾರ್ಯ

ಬೆಳ್ತಂಗಡಿ : ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತುರ್ತು ಸ್ಪಂದಿಸಿ ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ದುರಸ್ಥಿ ಕಾರ್ಯ ಜು. 27 ರಂದು ನಡೆಯಿತು.

ರಾತ್ರಿ ಸುರಿದ ವಿಪರೀತ ಗಾಳಿ ಮಳೆಗೆ ನಡ ಸ.ಹಿ. ಪ್ರಾಥಮಿಕ ಶಾಲೆಯ ಮಾಡಿನ ಸುಮಾರು 150 ಕ್ಕೂ ಅಧಿಕ ಹಂಚುಗಳು ಗಾಳಿಗೆ ಹಾರಿ ಹೋಗಿದ್ದು ಜು.27 ರಂದು ಶಾಲಾ ಮುಖ್ಯ ಶಿಕ್ಷಕರು ಶಾಲೆಗೆ ಬಂದಾಗ ಕೊಠಡಿಯೊಳಗೆ ನೀರು ತುಂಬಿ ಹರಿಯುತ್ತಿದ್ದನ್ನು ಗಮನಿಸಿ . ತಕ್ಷಣ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರಾದ ಎಸ್.ಡಿ.ಎಮ್.ಸಿ ಅಧ್ಯಕ್ಷ ವಸಂತ್ ರವರಿಗೆ ದೂರವಾಣಿ ಕರೆ ಮೂಲಕ ವಿಷಯ ತಿಳಿಸಿದರು.

ಈ ವಿಷಯವನ್ನು ಗಮನಿಸಿದ ವಸಂತ ರವರು ತಕ್ಷಣ ಶಾಲೆಗೆ ಭೇಟಿ ನೀಡಿ ಶಾಲಾ ಮುಖ್ಯ ಶಿಕ್ಷಕರು ಸೇರಿ ಕೂಡಲೇ ಕನ್ಯಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಿಳಿಸಿ ಪಂಚಾಯತ್ ಅಧಿಕಾರಿಗಳು ತಕ್ಷಣ ಶಾಲೆಗೆ 150 ರಷ್ಟು ಹಂಚನ್ನು ಶಾಲೆಗೆ ಒದಗಿಸಿ ಶಾಲೆಗೆ ಭೇಟಿ ನೀಡಿದರು.

ನಂತರ ಸ್ವಯಂ ಸೇವಕರಾದ ವಸಂತ್ ರವರು ಘಟಕದ ಸಂಯೋಜಕರಾದ ವಸಂತಿಯವರ ಗಮನಕ್ಕೆ ತಿಳಿಸಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಒಲ್ವಿನ್ ಡಿಸೋಜ, ಎನ್ ಬಿ ಹರಿಶ್ಚಂದ್ರ, ಅರ್ವಿನ್ ಮಿರಾಂದ, ಘಟಕ ಪ್ರತಿನಿಧಿ ಮಂಜುನಾಥ್ ರವರನ್ನು ಒಗ್ಗೂಡಿಸಿಕೊಂಡು ಶಾಲೆಯ ಮೇಲ್ಛಾವಣಿ ದುರಸ್ಥಿ ಕಾರ್ಯಾಚರಣೆ ನಡೆಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಾದ ಕಿರಣ್ ರವರು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ, ಸಹ ಶಿಕ್ಷಕರು ಉಪಸ್ಥಿತರಿದ್ದು ಸ್ವಯಂ ಸೇವಕರ ಸೇವೆಗೆ ಬಹಳ ಮೆಚ್ಚುಗೆ ಸೂಚಿಸಿ ಅಭಿನಂದಿಸಿದರು.

Related posts

ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ರಿಗೆ ದಿ| ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮನಶ್ರೀ ರವರಿಗೆ ಬಿಜೆಪಿ ಬೆಳ್ತಂಗಡಿ ಮಂಡಲದಿಂದ ಸನ್ಮಾನ

Suddi Udaya

ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ: ರೂ. 20.16ಲಕ್ಷ ಲಾಭ, ಸದಸ್ಯರಿಗೆ ಶೇ.25 ಡಿವಿಡೆಂಡ್‌

Suddi Udaya

ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆ

Suddi Udaya

ಮಾ.27: ಮುಳಿಯದಲ್ಲಿ ಡೈಮಂಡ್ ಫೆಸ್ಟ್-50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

Suddi Udaya

ಉಜಿರೆ : ಕೆ – ಸಿ.ಇ.ಟಿ. -2025 ಮಾಹಿತಿ ಕಾರ್ಯಾಗಾರ ಸಂಪನ್ನ

Suddi Udaya
error: Content is protected !!