April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ: ದೇವರ ದರ್ಶನ ಬಲಿ, ಪಲ್ಲ ಪೂಜೆ

ಬೆಳ್ತಂಗಡಿ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಎರಡನೇ ದಿನವಾದ ಇಂದು (ಜ.25) ದೇವರಿಗೆ ದರ್ಶನ ಬಲಿ, ಪಲ್ಲ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯ ಮಾರ್ಗದರ್ಶನದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ರಾಘವೇಂದ್ರ ಅಸ್ರಣ್ಣರ ನೇತೃತ್ವದಲ್ಲಿ ಬೆಳಗ್ಗೆ ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ, ನಿತ್ಯ ಪೂಜೆ, ದೇವರ ಬಲಿ ನಡೆಯಿತು.

ದೇವಳದ ಟ್ರಸ್ಟಿ, ನಿವೃತ್ತ ಯೋಧ ದಿನೇಶ್ ಗೌಡ ಕಲಾಯಿತೊಟ್ಟು, ಪ್ರಸ್ತುತ ಸೇವೆಯಲ್ಲಿರುವ ಯೋಧರಾದ
ಬೇಬಿ ಗೌಡ ಪೇರಾಜೆ, ವಿಕ್ರಂ ಜೆ.ಎನ್. ವಂಜಾರೆ ಹಾಗೂ ಪ್ರಮೋದ್ ಗೌಡ ಬಾಕಿಮಾರು ಅವರ ಸೇವೆಯಾಗಿ ಅನ್ನದಾನ ನಡೆಯಿತು. ಈ ಸಂದರ್ಭ ಅನ್ನದಾನ ಸೇವಾರ್ಥಿಗಳ ಮನೆಯವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಭಜನಾ ಮಂಡಳಿ ಅಧ್ಯಕ್ಷರು, ಪಸಾಧಿಕಾರಿಗಳು ಸದಸ್ಯರು, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ದೇವಳದ ಸಿಬ್ಬಂದಿಗಳು, ಜಾತ್ರಾ ಮಹೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ಸಂಜೆ ದೇವರ ಬಲಿ ಹೊರಟು, ಕೆರೆಕಟ್ಟೆ ಉತ್ಸವ, ಮಹಾಪೂಜೆ, ನಿತ್ಯ ಬಲಿ, ದೀಪದ ಬಲಿ ಕಾರ್ಯಕ್ರಮ ಜರುಗಲಿದೆ.
ರಾತ್ರಿ ಧಾರ್ಮಿಕ ಸಭೆ, ನಾಳ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೇಸರಿ ಗೆಳೆಯರ ಬಳಗದ ಮೋಕೆದ ಕಲಾವಿದೆರ್ ತಂಡದ ಸದಸ್ಯರಿಂದ ತುಳು ಹಾಸ್ಯಮಯ ನಾಟಕ ಕಾಸ್ ದ ಕಸರತ್ತ್ ನಾಟಕ ನಡೆಯಲಿದೆ

Related posts

ಸುಲ್ಕೇರಿಮೊಗ್ರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಶೇ. 51.29 ಮತದಾನ

Suddi Udaya

ವಾಣಿ ಕಾಲೇಜು: ಸಮಾನ ನಾಗರಿಕ ಸಂಹಿತೆ ಮಾಹಿತಿ ಉಪನ್ಯಾಸ

Suddi Udaya

ಕಳಿಯ: ಬಾಕಿಮಾರು ನಿವಾಸಿ ಶ್ರೀಮತಿ ರುಕ್ಮಿಣಿ ನಿಧನ

Suddi Udaya

ಸೆ.25 -ಅ.8: ನಾವೂರುನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ‘ ಸ್ವಾಗತಮ್ ‘ ಸಮಾರಂಭ

Suddi Udaya
error: Content is protected !!