25.8 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿ

ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್:ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ನೇತೃತ್ವದ ತಂಡದಿಂದ ನೆಲಸಮ

ಬೆಳ್ತಂಗಡಿ : ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್ ನ್ನು ಜೆಸಿಬಿ ಮೂಲಕ ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ನೇತೃತ್ವದ ತಂಡ ನೆಲಸಮಗೊಳಿಸಿದ್ದಾರೆ.

ಪ್ರಕರಣದ ವಿವರ:ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಹಾಲಿನ ಡೈರಿ ಹಿಂಭಾಗದ ಸರ್ವೆ ನಂಬರ್ 149/3A ನಲ್ಲಿ 11 ಸೆನ್ಸ್ ಖಾಲಿ ಜಾಗದಲ್ಲಿ ಅಬುಸಾಲಿ ಮಕ್ಕಳಾದ ರೌಫ್ ಮತ್ತು ನಿಸರ್ ಸಹೋದರರು ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಗೆ ದೂರು ಬಂದಿತ್ತು. ಅದರಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಜ.18 ಕ್ಕೆ ಜಾಗದ

ಪರಿಶೀಲನೆಗೆ ತೆರಳಿದ್ದರು. ಈ ವೇಳೆ ರೌಫ್ ಮತ್ತು ನಿಸರ್ ತಹಶೀಲ್ದಾ‌ರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು.ಬಳಿಕ ಕಂದಾಯ ನಿರೀಕ್ಷಕರಿಗೂ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಈ ಬಗ್ಗೆ ತಹಶೀಲ್ದಾ‌ರ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜ.19 ರಂದು ದೂರು ದಾಖಲಿಸಿದ್ದರು.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದ ಕಂದಾಯ ಇಲಾಖೆಯ ಸಿಬ್ಬಂದಿ ಜ.25 ರಂದು ಸಂಜೆ (ಇಂದು) ಜೆಸಿಬಿ ಬಳಸಿ ಅಕ್ರಮ ಶೆಡ್ ನೆಲಸಮ ಮಾಡಲಾಯಿತು. ಈ ವೇಳೆ ಅಹಿತಕರ ಘಟನೆ ನಡೆಯದಂತೆ ಬೆಳ್ತಂಗಡಿ ಪೊಲೀಸರು ಭದ್ರತೆ ವಹಿಸಿದ್ದರು.

Related posts

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ವೈಭವದ ಸಿರಿಹಬ್ಬ-2026 ಉದ್ಘಾಟನೆ

Suddi Udaya

ವೇಣೂರು: ಪಡ್ಡ೦ದಡ್ಕ ನಿವಾಸಿ ಪಿ .ಎಸ್ .ಅಬ್ದುಲ್ ಜಲೀಲ್ ನಿಧನ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಶೇ. 32.39 ಮತದಾನ

Suddi Udaya

ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸಭೆ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಜಿ.ಎಸ್.ಟಿ ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ: ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ಬಟಾ ಬಯಲು – ಹರೀಶ್ ಪೂಂಜ

Suddi Udaya
error: Content is protected !!