27.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಲವಂತಿಗೆ: ಉಮೇಶ್ ರವರಿಗೆ ಹಲ್ಲೆ, ಬೆದರಿಕೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಮಲವಂತಿಗೆ ನಿವಾಸಿ ಉಮೇಶ್‌ ರವರು ರಾತ್ರಿ ಮೋಟಾರ್ ಸೈಕಲ್ ನಲ್ಲಿ ಮನೆಗೆ ಹೋಗುವ ಸಂದರ್ಭ ಉಕ್ಕುಡ ಎಂಬಲ್ಲಿ ಗುಂಪೊಂದು ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಘಟನೆ ಜ.23 ರಂದು ನಡೆದಿದೆ.

ಮಲವಂತಿಗೆ ನಿವಾಸಿ ಉಮೇಶ್‌ (35) ಎಂಬವರ ದೂರಿನಂತೆ, ಜ. 23 ರಂದು ರಾತ್ರಿ ಉಮೇಶ್ ರವರು ಬಾಬ್ತು ಮೋಟಾರ್‌ ಸೈಕಲ್‌ ನಲ್ಲಿ ಮನೆಗೆ ಹೋಗುತ್ತಾ ಉಕ್ಕುಡ ಎಂಬಲ್ಲಿಗೆ ತಲುಪಿದಾಗ, ಆರೋಪಿಗಳಾದ ರಮೇಶ್‌ ನಾಯ್ಕ, ದಯಾನಂದ, ರವಿ,ಸುರೇಶ, ಸಂತೋಷ್‌, ಪ್ರವೀಣ್‌ ಕುಮಾರ್‌ , ಅರುಣ್‌ , ಆದಿ ಜೈನ್‌, ಅನಿಲ್‌ ಜೈನ್‌, ಸಾವಂತ್‌ ,ಸುನೀಲ್‌,ಪ್ರಕಾಶ್‌ ಕುಮಾರ್‌, ಮತ್ತು ಯೂಸುಫ್‌ ರವರು ಉಮೇಶ್ ರವರನ್ನು ತಡೆದು ನಿಲ್ಲಿಸಿ, ಆರೋಪಿಗಳ ಪೈಕಿ ರಮೇಶ್‌ ನಾಯ್ಕ ರವರ ಮನೆಯ ಅಂಗಳಕ್ಕೆ ಎಳೆದುಕೊಂಡು ಹೋಗಿದ್ದು, ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಪಡಿಸಿರುತ್ತಾರೆ.

ಆರೋಪಿಗಳ ಪೈಕಿ ರಮೇಶ್‌ ನಾಯ್ಕ , ದಯಾನಂದ, ರವಿ ಮತ್ತು ಸುರೇಶ್‌ ರವರು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ, ಮೆಣಸಿನ ಹುಡಿ ಎರಚಿದ್ದು, ಬಳಿಕ‌ ಆರೋಪಿಗಳು ಜೀವ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ. ನಂ: 06/2024 ಕಲಂ: 143,147,148,341,324,504,506, ಜೊತೆಗೆ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

Suddi Udaya

ಉಜಿರೆ: ಎಸ್ ಡಿ ಯಂ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಬೆಳ್ತಂಗಡಿ : KAF ಕ್ರಿಯೇಟಿವ್ ಶಾಪ್ ನಲ್ಲಿ ಹಿಲಿಯಂ ಗ್ಯಾಸ್ ಬ್ಲಾಸ್ಟ್ : ಬೆಂಕಿ ಕೆನ್ನಾ ‌ಲಿಗೆ ಸುಟ್ಟು ಭಸ್ಮವಾದ ವಸ್ತುಗಳು

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ಕಿಂಡರ್‌ಗಾರ್ಟನ್ ವಿಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಂಭ್ರಮ

Suddi Udaya

ಲಾಯಿಲ: ಗಂಗಮ್ಮ ಪೂಜಾರಿ ನಿಧನ

Suddi Udaya

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ, ಸಂಶೋಧನೆ, ಮತ್ತು ಉದ್ಯಮಶೀಲತೆ ಕಾರ್ಯಾಗಾರ

Suddi Udaya
error: Content is protected !!