ಉಜಿರೆ: ವಿಜಯನಗರ ಅಜಿತ್‌ನಗರ (ಕಲ್ಲೆ) ಎಂಬಲ್ಲಿ ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಆರಾಧನೆಯು ಜ.26ರಂದು ನಡೆಯಿತು.
ಇಂದು ಬೆಳಿಗ್ಗೆ ಪುಣ್ಯಾಹ, ಕಲಶ ಪ್ರತಿಷ್ಠೆ, ಗಣಪತಿ ಹೋಮ (೧೨ ಕಾಯಿ) ಪೂರ್ಣಾಹುತಿ, ಅಭಿಷೇಕಾದಿಗಳು, ಪರ್ವಾರಾಧನೆಗಳು,ದುರ್ಗಾಹೋಮ, ಪೂರ್ಣಾಹುತಿ, ಆಶ್ಲೇಷ ಬಲಿ, ಮಧ್ಯಾಹ್ನ ಮಹಾಪೂಜೆ, ವಟು, ಬ್ರಾಹ್ಮಣ ಆರಾಧನೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಿತು., ಸಂಜೆ ಸಂಕಲ್ಪ, ರಂಗಪೂಜೆ ನಡೆಯಲಿದೆ.
ಈ ಸಂದರ್ಭದಲ್ಲಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ಮಾಲಕ ಮೋಹನ್ ಕುಮಾರ್ ಮತ್ತು ಬಂಧು ಬಳಗ, ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಸಂಧ್ಯಾ ಟ್ರೇಡರ್ ರಾಜೇಶ್ ಪೈ ಹಾಗೂ ಊರವರು, ಭಕ್ತರು ಉಪಸ್ಥಿತರಿದ್ದರು.