ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಶಕ್ತರಿಗೆ ಆರ್ಥಿಕ ಸಹಕಾರ, 500 ಗಿಡಗಳ ವಿತರಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಅಶಕ್ತ ಮೂರು ಕುಟುಂಬಗಳಿಗೆ ಆರ್ಥಿಕ ಸಹಕಾರ, 500 ವಿವಿಧ ಜಾತಿಯ ಗಿಡಗಳ ವಿತರಣೆಯೊಂದಿಗೆ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಮುಂಡಾಜೆಯಲ್ಲಿ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಸಲಾಯಿತು.


ಮುಂಡಾಜೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಯನ್ಸ್ ಸುವರ್ಣ ಮಹೋತ್ಸವ ವರ್ಷದ ನೆನಪಿಗಾಗಿ ಕೊಡಮಾಡಿದ ನೂತನ ಧ್ವಜಕಟ್ಟೆಯಲ್ಲಿ ಪ್ರಥಮ ಧ್ವಜಾರೋಹಣವನ್ನು ಧ್ವಜ ಕಟ್ಟೆಯ ದಾನಿ , ನ್ಯಾಯವಾದಿ
‌ಮುರಳಿ ಬಲಿಪ ಧ್ವಜಾರೋಹಣ ನೆರವೇರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಲ. ಅನಂತಕೃಷ್ಣ, ಸದಸ್ಯರಾದ ಲ. ನಾಮದೇವ ರಾವ್, ಲ. ನಾಣ್ಯಪ್ಪ, ಲ. ಪುರುಷೋತ್ತಮ ಶೆಟ್ಟಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹಿಮಾಂಶು ಎಸ್.ವಿ ಭಾಗವಹಿಸಿದರು.


ಸಮಾರಂಭದಲ್ಲಿ ಸುಶ್ರೂಷಕ ಅಧಿಕಾರಿ ರೀನಾ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಸಿಂಧು ಅಜಿತ್ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ರೂಪಲತಾ ಮತ್ತು ಜಯಶ್ರೀ, ಆಶಾ ಕಾರ್ಯಕರ್ತರರಾದ ಚಂದ್ರಾವತಿ ಉಮೇಶ್ ಮತ್ತು ಗಾಯತ್ರಿ ವಿಜಯ ಕುಮಾರ್ ರೈ, ಗ್ರಾ‌ಪಂ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತ ಅಬ್ದುಲ್ ಮಜೀದ್, ಆಸ್ಪತ್ರೆಯ ಸಿಬ್ಬಂದಿ ಬೇಬಿ ಉಪಸ್ಥಿತರಿದ್ದರು.


ಬುದ್ದಿಮಾಂದ್ಯ ನಾಗರಾಜ ನಾಯ್ಕ್ ಕೊಡಂಗೆ, ವಿಕಲಚೇತನ ಅಬ್ದುಲ್ ರಹುಮಾನ್ ನಿಡಿಗಲ್ ಮತ್ತು ಲಿಂಗಪ್ಪ ಶೆಟ್ಟಿ ಅವರ ಅನಾರೋಗ್ಯ ಪೀಡಿತ ಪತ್ನಿಗೆ ಈ ವೇಳೆ ಆರ್ಥಿಕ ಸಹಕಾರದ ಚೆಕ್ ನೀಡಲಾಯಿತು.


ಲಯನ್ಸ್ ಕ್ಲಬ್ ಮಾಧ್ಯಮ ಪ್ರತಿನಿಧಿ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದ್ದರು.
ಆಸ್ಪತ್ರೆಯ ಎಂಟೆಂಡರ್ ಕುಸುಮಾ ವಂದಿಸಿದರು.

Leave a Comment

error: Content is protected !!