September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಎಸ್. ಡಿ. ಎಂ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ

ಉಜಿರೆ: ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆ, (ಸಿ.ಬಿ.ಎಸ್.ಇ) ಮತ್ತು ಶ್ರೀ.ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಾರ್ಗದರ್ಶನ ನೀಡುವ ಸಲುವಾಗಿ “ವೃತ್ತಿ ಮಾರ್ಗದರ್ಶನ” ಎಂಬ ಕಾರ್ಯಕ್ರಮವನ್ನು ನ.18 ರಂದು ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಉಪನ್ಯಾಸಕ ರೊನಾಲ್ಡ್ ಪಿಂಟೊ ವಿದ್ಯಾರ್ಥಿಗಳಿಗೆ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳ ಉದ್ಯೋಗ ಅವಕಾಶಗಳ ಕುರಿತು ಮಾಹಿತಿಯ ಜೊತೆಗೆ ತಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ತಿಳಿದು ಆ ವಿಷಯದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಹೊಂದುವುದು ಸೂಕ್ತ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಮುಖ್ಯೋಪಾಧ್ಯಾಯರಾದ ಮನಮೋಹನ್ ನಾಯಕ್ ಕೆ.ಜಿ ಹಾಗೂ ಎಸ್.ಡಿ.ಎಮ್ ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಇವರು ಉಪಸ್ಥಿತರಿದ್ದರು. ಶಿಕ್ಷಕಿ ಕಲ್ಯಾಣಿ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಕರಾಟೆ ಕ್ರೀಡಾಕೂಟ: ಬೆಳ್ತಂಗಡಿ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮಾಲಾಡಿ: ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಪಿಕಪ್ ನಡುವೆ ಅಪಘಾತ

Suddi Udaya

ತಣ್ಣೀರುಪಂತ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಗುರುಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ : ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿನಿ ಪ್ರಥಮ

Suddi Udaya

ಗುರುವಾಯನಕೆರೆ: ನಿವೃತ್ತ ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲರ್ ಕೃಷ್ಣ ಕಾಮತ್ ನಿಧನ

Suddi Udaya

ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!