23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ

ವೇಣೂರು: ಇಲ್ಲಿಯ ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮತ್ತು ತಾಲೂಕು ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಫೆ.10 ರಂದು ಗುಂಡೂರಿ ತುಂಬೆದಲೆಕ್ಕಿ ಶ್ರೀ ಸತ್ಯ ನಾರಾಯಣ ಭಜನಾ ಮಂದಿರದ ಸಮೀಪ ನಡೆಯಲಿದೆ.

ಕಾರ್ಯಕ್ರಮದಲ್ಲಿ ಗುಂಡೂರಿ ಗ್ರಾಮದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು, ಯುನಿರ್ವಸಿಟಿ ಗೋಲ್ಡ್ ಮೆಡಲಿಸ್ಟ್ ಕಬಡ್ಡಿ ಆಟಗಾರರಾದ ಸುಶಾಂತ್ ಶೆಟ್ಟಿ ಗರ್ಡಾಡಿ, ಪ್ರಜ್ವಲ್ ಶಿವಮೊಗ್ಗ , ಶಶಾಂಕ್ ಕುಮಾರ್ ಹಾಗೂ ಕಂಬಳದ ನಂದಳಿಕೆಯ ಪಾಂಡು ಕೋಣಕ್ಕೆ ಗೌರವಾರ್ಪಣೆ ನಡೆಯಲಿದೆ.

ಸ್ಪರ್ಧೆಯ ಪ್ರವೇಶ ಶುಲ್ಕ ರೂ.500., ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ. 15000 ಮತ್ತು ಕಟ್ಟೆ ಫ್ರೆಂಡ್ಸ್ ಟ್ರೋಫಿ, ದ್ವಿತೀಯ 10000 ಮತ್ತು ಕಟ್ಟೆ ಫ್ರೆಂಡ್ಸ್ ಟ್ರೋಫಿ, ತೃತೀಯ ರೂ.5000 ಮತ್ತು ಕಟ್ಟೆ ಫ್ರೆಂಡ್ಸ್ ಟ್ರೋಫಿ, ಚತುರ್ಥ ರೂ.5000 ಮತ್ತು ಕಟ್ಟೆ ಫ್ರೆಂಡ್ಸ್ ಟ್ರೋಫಿ, ಹಾಗೂ ವೈಯಕ್ತಿಕ ಬಹುಮಾನ ಬೆಸ್ಟ್ ರೈಡರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಕ್ಯಾಚರ್ ಸಿಗಲಿದೆ.

Related posts

ಪ್ರತಿಭಾ ಕಾರಂಜಿ ಭರತನಾಟ್ಯ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಹಂಸಿನಿ ಭಿಡೆ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಶೇ.95.25

Suddi Udaya

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ಉಜಿರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya

ಬಳಂಜ, ನಿಟ್ಟಡ್ಕ ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya
error: Content is protected !!