ಕುಕ್ಕೇಡಿ : ಇಲ್ಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ಕತೂರು ಕಡ್ತ್ಯಿರ್ ಎಂಬಲ್ಲಿ ಕಾಯಾ೯ಚರಿಸುತ್ತಿದ್ದ ಸುಡುಮದ್ದು ತಯಾರಿಸುವ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿ, ಮೂವರು ಸಾವನ್ನಪ್ಪಿ,ಹಲವು ಮಂದಿ ಗಾಯಗೊಂಡ ದುಘ೯ಟನೆ ಜ.28 ರಂದು ಸಂಜೆ ಸಂಭವಿಸಿದೆ.
ಘಟಕದಲ್ಲಿ ಕೆಲಸ ನಿರತ ತ್ರಿಶೂತಿನ ವರ್ಗೀಸ್, ಹಾಸನ ಅಮಖನಾಯಕನ ಹಳ್ಳಿ ಚೇತನ್, ಕೇರಳದ ಸ್ವಾಮಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು ಎಂದು ವರದಿಯಾಗಿದೆ.
ಮೃತರಲ್ಲಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹ ಸ್ಫೋಟದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ. ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಇಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಉಳ್ತೂರು ಕಡ್ತ್ಯಿರ್ ಎಂಬಲ್ಲಿ ಬಸೀರ್ ಸ್ವಾಲಿಕ್ ಎಬವರು ನಡೆಸುತ್ತಿರುವ ಸುಡುಮದ್ದು ತಯಾರಿಸುವ ಘಟಕದಲ್ಲಿ ಈ ಸ್ಫೋಟ ಘಟನೆ ನಡೆದಿದೆ.
ಈ ಘಟಕದಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆಂದು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ ಆದರೆ ಹೊರ ಊರಿನ ಸುಮಾರು ಒಂಭತ್ತು ಮಂದಿ ಕೆಲಸ ಮಾಡುತ್ತಿದ್ದಾರೆಂದು ಸ್ಥಳೀಯರು ಹೇಳುತ್ತಾರೆ.
ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಣೂರು ಪೋಲೀಸ್‌ರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಭೀಕರ ಸ್ಫೋಟದಿಂದ ಹತ್ತಿರದ ಮೂರ್ನಾಕು ಮನೆಗಳಿಗೆ ಹಾನಿಯಾಗಿದೆ. ಘಟಕದ ಸುತ್ತಾ ಕಟ್ಟಿದ್ದ ಕಾಂಪೌಂಡ್ ಪುಡಿ , ಪುಡಿಯಾಗಿದೆ. ಸ್ಫೋಟದ ತೀವ್ರತೆಗೆ ಭೂಮಿ ಕಂಪನದಂತಹ ಅನುಭವವಿಗಿದ್ದು, ಮನೆಯ ಪಾತ್ರೆ ಕೆಳಗೆ ಬಿದ್ದಿದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಕೆ.ವಿ ತಿಳಿಸಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸ್ಥಳದಲ್ಲಿ ಶೆಡ್ ಸಂಪೂರ್ಣ ದ್ವಂಸವಾಗಿದ್ದು ಇದರ ಸದ್ದು 4 ಕಿ.ಮೀ. ವ್ಯಾಪ್ತಿಯಷ್ಟು ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್.ಪಿ ರಿಷ್ಯಂತ್, ಡಿವೈಎಸ್ ಪಿ ವಿಜಯ ಪ್ರಸಾದ್, ಶಾಸಕ ಹರೀಶ್ ಪೂಂಜ, ಸಕ೯ಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿವೇಣೂರು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಠೆ ತಿಳಿಯಬೇಕಾಗಿದೆ..