23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ನೂತನ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮ

ಬೆಳ್ತಂಗಡಿ:ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಹೊಸ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಜೆಸಿಯ ಮಿಷನ್, ದೃಷ್ಟಿಕೋನ ಮತ್ತು ಮೌಲ್ಯಗಳ ಬಗ್ಗೆ ಆಳವಾದ ಅರಿವನ್ನು ನೀಡುವುದರ ಜೊತೆಗೆ, ಸಂಸ್ಥೆಯ ರಚನೆ, ಆಡಳಿತ ಮತ್ತು ಒಳನೋಟಗಳ ಬಗ್ಗೆ ಸವಿವರವಾಗಿ ತರಬೇತಿಯನ್ನು
ಹೊಸ ಸದಸ್ಯರಿಗೆ ಸಮುದಾಯದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು, ನೆಟ್‌ವರ್ಕಿಂಗ್ ಅವಕಾಶಗಳು ಮತ್ತು ಸಮುದಾಯದ ಪ್ರಭಾವವನ್ನು ಉತ್ತೇಜಿಸುವ ಜೆಸಿಐಯ ಬದ್ಧತೆಯನ್ನು ಅನುಭವಿ ಜೆಸಿಐ ವಲಯ ತರಬೇತುದಾರರಾದ ಸುಧೀರ್ ಕೆ ಎನ್ ಮತ್ತು ಶಂಕರ್ ರಾವ್ ನಡೆಸಿಕೊಟ್ಟರು.

ಘಟಕದ ಅಧ್ಯಕ್ಷರು ರಂಜಿತ್ ಎಚ್‌ ಡಿ, ಬಳಂಜ ಅಧ್ಯಕ್ಷತೆಯನ್ನು ವಹಿಸಿದ್ದರು.

ಲೇಡಿ ಜೆಸಿ ಸಂಯೋಜಕರಾದ ಶ್ರುತಿ ರಂಜಿತ್, ಜೆಜೆಸಿ ಅಧ್ಯಕ್ಷ ಸಮನ್ವಿತ್ ಕುಮಾರ್, ಕಾರ್ಯಕ್ರಮದ ನಿರ್ದೇಶಕ ಚಂದ್ರಹಾಸ ಬಳಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಗೆ ಗಣ್ಯರನ್ನು ಪ್ರಮೋದ್ ಆಹ್ವಾನಿಸಿದರು ,ಜೆಸಿ ವಾಣಿಯನ್ನು ರಾಮಕೃಷ್ಣ ವಾಚಿಸಿದರು ತರಬೇತುದಾರರ ಪರಿಚಯವನ್ನು ನೂತನ ಸದಸ್ಯರುಗಳಾದ ಆದರ್ಶ್ ಬಳಂಜ ಮತ್ತು ರಂಜನ್ ಧರ್ಮಸ್ಥಳ ವಾಚಿಸಿದರು . ಘಟಕದ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನೂತನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅನುದೀಪ್ ಜೈನ್ ಅವರು ಧನ್ಯವಾದ ಸಲ್ಲಿಸಿದರು.

Related posts

ಧರ್ಮಸ್ಥಳ : ಅಸಹಜ ಸಾವು ಪ್ರಕರಣ : ಮಾಸಾಂತ್ಯಕ್ಕೆ ಎಸ್‌ಐಟಿ ಯಿಂದ ವರದಿ ಸಲ್ಲಿಕೆ

Suddi Udaya

ಚಾರ್ಮಾಡಿ: ಅಣಿಯೂರು ಗುತ್ತು ನಿವಾಸಿ ಕೃಷಿಕ ವಾಸುದೇವ ಗೌಡ ನಿಧನ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗೀತಾ ಗಾಯನ ಸ್ಪರ್ಧೆ

Suddi Udaya

ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮತ್ತು ಸುರಕ್ಷತೆಯ ತಂತ್ರಜ್ಞಾನವನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ISO 27001 ಪ್ರಶಸ್ತಿ ಪ್ರದಾನ

Suddi Udaya

ಪಣಕಜೆ : ಕಾರು ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರ ಅಪಾಯದಿಂದ ಪಾರು

Suddi Udaya
error: Content is protected !!