ಉರುವಾಲು ಕಾರಿಂಜ ಬಾಕಿಮಾರು ದೈವಸ್ಥಾನದ “ಕಾರಿಂಜ ಶ್ರೀ ಕಲ್ಕುಡ” ಧ್ವನಿ ಸುರುಳಿ ಬಿಡುಗಡೆ

Suddi Udaya

ಉರುವಾಲು ಗ್ರಾಮದ ಕಾರಿಂಜ ಬಾಕಿಮಾರು ದೈವಸ್ಥಾನದ ಕಾರಿಂಜ ಶ್ರೀ ಕಲ್ಕುಡ ಎಂಬ ಧ್ವನಿ ಸುರುಳಿಯನ್ನು ಕಾರಿಂಜ ಬಾಯ್ತಾರು ನೇಮೋತ್ಸವದಂದು ಆಡಳಿತ ಸಮಿತಿಯ ಅಧ್ಯಕ್ಷರಾದ ವಿಜಯ ಕುಮಾರ್ ಕಲ್ಲಳಿಕೆ ಬಿಡುಗಡೆ ಮಾಡಿದರು.

ಶ್ರೀಮತಿ ರಕ್ಷಿತ ಪಿ ಸುರೇಂದ್ರ ಬಂಗೇರ ಶ್ರೀ ದುರ್ಗ ಕಾರಿಂಜ ಹಾಗೂ ಶ್ರೀಮತಿ ನವ್ಯ ಮತ್ತು ಶ್ರೀ ಗೋಪಾಲಕೃಷ್ಣ ಗೌಡ ಅಲೈಮಾರು ಇವರು ಸಹಕಾರದಲ್ಲಿ ಸಾಹಿತ್ಯ ಸುಮನ್ ಎರ್ಮೆತ್ತೋಡಿ, ಹಾಡಿನ ಗಾಯಕರಾದ ಪ್ರದೀಪ್ ನಾಯ್ಕ‌ ಆನಡ್ಕ ಹಾಗೂ ಯಶವಂತ ಕಾರಿಂಜ, ಇವರ ಕಂಠದಲ್ಲಿ ಮೂಡಿಬಂದ ಗಾಯನವನ್ನು
ವಿಡಿಯೋಗ್ರಾಫಿ ಮೋಹಿತ್ ಕುಲಾಲ್ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ಅಂಡೆತಡ್ಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿ, ಕಾರಿಂಜ ಶಾಲೆಯ ಅಧ್ಯಕ್ಷ ಜಗನ್ನಾಥ ರೈ ನೀನಿ, ಗ್ರಾ.ಪಂ ಮಾಜಿ ಸದಸ್ಯರಾದ ಗಣೇಶ ಪೂಜಾರಿ ನೀನಿ, ಗಣೇಶ ಪೂಜಾರಿ ಕಾರಿಂಜ, ಜಾತ್ರೋತ್ಸವ ಕಾರ್ಯದರ್ಶಿ ರತ್ನಾಕರ ಗೌಡ ಖಂಡಿಗ, ಸಿ.ಎ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಹಣಾ ಅಧಿಕಾರಿ ಡೀಕಯ್ಯ ಸಿ ಆನಡ್ಕ, ವಸಂತ ಸಾಲ್ಯಾನ್ ಆನಡ್ಕ, ಸತೀಶ್ ಪೂಜಾರಿ ಉದ್ಯ, ಗ್ರಾ.ಪಂ ಅಧ್ಯಕ್ಷ ಯಶವಂತ ಕಾರಿಂಜ, ಮೆಸ್ಕಾಂ ಅಧಿಕಾರಿ ಗೋಪಾಲಕೃಷ್ಣ ಗೌಡ ಅಲೈಮಾರು, ಅಂಡೆತಡ್ಕ ಶಾಲಾ ಅಧ್ಯಕ್ಷರಾದ ಸತೀಶ್ ಪಿಲಿಕಲ್ಲು, ಕಲ್ಲೇರಿ ಸಿ.ಎ ಬ್ಯಾಂಕ್ ನ ಸದಸ್ಯ ಓಬಯ್ಯ ಪೂಜಾರಿ ಕಾರಿಂಜ, ಕೊರಗಪ್ಪ ಪೂಜಾರಿ ಕಾರಿಂಜ, ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಮಂಜುನಾಥ ಗೌಡ ಪಿಲಿಕಲ್ಲು, ಉಮೇಶ್ ಗೌಡ ಖಂಡಿಗ, ಗಣೇಶ ಗೌಡ ಪಿಲಿಕಲ್ಲು, ಆನಂದ ಗೌಡ ಮನೆಗಾರಮಜಲು ಉಪಸ್ಥಿತರಿದ್ದರು.

Leave a Comment

error: Content is protected !!