ಬೆಳ್ತಂಗಡಿ: ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು. ಜನವರಿ 20 ಮತ್ತು 21ರಂದು ಸವಣೂರಿನಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮುಂಡೂರು ಶ್ರೀ ಶಾರದಾಂಬ ಯುವಕ ಮಂಡಲವನ್ನು ಪ್ರತಿನಿಧಿಸಿ ಯುವಕರ ವೈಯಕ್ತಿಕ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಅಭಿಲಾಶ್ ಭಟ್ ಮುಂಡೂರು ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಯುವತಿಯರ ವೈಯಕ್ತಿಕ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಬಿ ಆರ್ ಎ ಕಲಾ ಮತ್ತು ಕ್ರೀಡಾ ಸಂಘ ಧರ್ಮಸ್ಥಳದ ಸುಪ್ರೀತಾ ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ರಂಗಗೀತೆಯಲ್ಲಿ ಕೀರ್ತನ ಕಲಾತಂಡ (ರಿ )ಮುಂಡಾಜೆ ಇದರ ನಾರಾಯಣಶೆಟ್ಟಿ ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಗುಂಪು ಸ್ಪರ್ಧೆಯಲ್ಲಿ ಜಾನಪದ ನೃತ್ಯ ದ್ವಿತೀಯ ತುಳು ಪ್ರಾದೇಶಿಕ ನೃತ್ಯ ದ್ವಿತೀಯ, ಸೋಬಾನೆ ಹಾಡು ತೃತೀಯ, ಪಾಡ್ದನ ತೃತೀಯ, ರಾಗಿ ಬೀಸುವ ಹಾಡು ತೃತೀಯ, ಕೋಲಾಟ ತೃತೀಯ ಸ್ಥಾನಗಳನ್ನು ಬಿ ಆರ್ ಎ ಕಲಾ ಮತ್ತು ಕ್ರೀಡಾ ಸಂಘವು ಪಡೆದಿರುತ್ತದೆ.
ಗುಂಪು ಸ್ಪರ್ಧೆಯಾದ ರಂಗಗೀತೆಯಲ್ಲಿ ಕೀರ್ತನ ಕಲಾತಂಡ ಮುಂಡಾಜೆ ತೃತೀಯ ಸ್ಥಾನವನ್ನು ಪಡೆದಿರುತ್ತದೆ.