ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಚಾರ್ಮಾಡಿ ಗ್ರಾಮದ ನಿವಾಸಿಯಾದ ಪವನ್ ಕುಮಾರ್ ರವರು ಪಣಕಜೆ ಗ್ರಾಮದ ಮುದಲ್ಕೆ ನಿವಾಸಿ ಕಮಲಾಕ್ಷರವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ ಎರಡು ಲಕ್ಷ ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ನ್ಯಾಯಲಯವು ತೀರ್ಪು ನೀಡಿರುತ್ತದೆ ಮತ್ತು ರೂಪಾಯಿ ಎರಡು ಲಕ್ಷವನ್ನು ಪವನ್ ಕುಮಾರ್ ರವರಿಗೆ ನೀಡುವಂತೆ ಹೇಳಿರುತ್ತದೆ. ತಪ್ಪಿದ್ದಲ್ಲಿ ರೂ.10,000 ದಂಡ ಹಾಗೂ 4 ತಿಂಗಳ ಸಜೆಯನ್ನು ನ್ಯಾಯಾಲಯವು ವಿಧಿಸಿರುತ್ತದೆ. ದಂಡ ಹಣವನ್ನು ಕಟ್ಟಲು ವಿಫಲವಾದರೆ ಮತ್ತೆ ಎರಡು ತಿಂಗಳ ಸಜೆಯನ್ನು ನ್ಯಾಯಾಲಯವು ವಿಧಿಸುತ್ತದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಪವನ್ ಕುಮಾರ್ ಪರವಾಗಿ ನ್ಯಾಯವಾದಿಯಾದ ಶ್ರೀಮತಿ ಪ್ರಿಯಾಂಕಾ ಶಿವನ್ ರವರು ವಾದವನ್ನು ಮಂಡಿಸಿರುತ್ತಾರೆ.