ಬೆಳ್ತಂಗಡಿ; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎಸ್ ಎಸ್ ಘಟಕ, ಲಯನ್ಸ್ ಹಾಗೂ ಲಿಯೋ ಕ್ಲಬ್ ಬೆಳ್ತಂಗಡಿ ಇವುಗಳ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜ.28 ರಂದು ಗುರಿಪಳ್ಳದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಲಕ್ಷ್ಮೀ ಇಂಡಸ್ಟ್ರೀಸ್ ನ ಮಾಲಕ ಮೋಹನ್ ಕುಮಾರ್ ಶಿಬಿರವನ್ನು ಉದ್ಘಾಟಿಸಿದರು. ಶ್ರೀ ದಂತ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ| ಎಂ.ಎಂ ದಯಾಕರ್ ಅಧ್ಯಕ್ಷತೆ ವಹಿಸಿದ್ದರು. ಲಯನ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಲಿಯೋ ಕ್ಲಬ್ ಅಧ್ಯಕ್ಷೆ ಅಪ್ಸರಾ ಎಚ್. ಆರ್. ಗೌಡ, ಕಾರ್ಯದರ್ಶಿ ಅನಂತಕೃಷ್ಣ,ಲಿಯೋ ಕಾರ್ಯದರ್ಶಿ ಸಿ.ಎ.ನಿರೀಕ್ಷಾ ಎನ್ ನಾವರ , ಸಂಘಟಕರಾದ ನಿತ್ಯಾನಂದ ನಾವರ, ಎಚ್. ರಾಮಕೃಷ್ಣ ಗೌಡ, ಡಾ. ದೇವಿ ಪ್ರಸಾದ್ ಬೊಲ್ಮ, ಅಶೋಕ್ ಕುಮಾರ್ ಬಿ.ಪಿ, ಲಿಯೋ ಕ್ಲಬ್ ಸದಸ್ಯರುಗಳಾದ ದೀಕ್ಷಿತ್, ನಿಕ್ಷೇಪ್ ಹಾಗೂ ಇತರ ಲಿಯೋ ಹಾಗೂ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ದಂತ ವಿಭಾಗ, ಕಣ್ಣು ಪರೀಕ್ಷೆ, ಕನ್ನಡಕ ವಿತರಣೆ, ಇತರ ಜನರಲ್ ಆರೋಗ್ಯ ತಪಾಸಣೆ ಇತ್ಯಾದಿ ವ್ಯವಸ್ಥೆ ಮಾಡಲಾಗಿತ್ತು. 400ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು