23.5 C
ಪುತ್ತೂರು, ಬೆಳ್ತಂಗಡಿ
April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಯುವ ವಕೀಲರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಕಟ್ಟೆ ಕಾರ್ಯಕ್ರಮ

ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ , ಯುವ ವಕೀಲರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಕಟ್ಟೆ ಮತ್ತು ವಕೀಲರಿಂದ, ವಕೀಲರಿಗಾಗಿ, ವಕೀಲರಿಗೋಸ್ಕರ ನೇರ ಸಂವಾದ ಕಾರ್ಯಕ್ರಮವು ಜ.31 ರಂದು ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಕೀಲರ ವೇದಿಕೆ ಅಧ್ಯಕ್ಷ ಸಂದೀಪ್ ಡಿಸೋಜ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಎಂ ಬದರಿನಾಥ ಸಂಪಿಗೆತ್ತಾಯ ಮಾತನಾಡಿ ನ್ಯಾಯಾಲಯದ ಕಾರ್ಯವಿಧಾನಗಳ ಮೂಲಭೂತ ಅಧ್ಯಯನ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಹಾಗೂ ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರು ಹಾಗೂ ಯುವ ವಕೀಲರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಸ್ವಾಗತಿಸಿ, ಯುವ ವಕೀಲರ ವೇದಿಕೆಯ ಕೋಶಾಧಿಕಾರಿ ಜಗದೀಶ್ ಧನ್ಯವಾದವಿತ್ತರು.

Related posts

ಮುಂಡೂರು ಶ್ರೀ ನಾಗಂಬಿಕಾ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಪೂಜಾ ಮಹೋತ್ಸವ

Suddi Udaya

ಕೊಕ್ರಾಡಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಅಕ್ಕಮ್ಮ ರವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಗೌರವ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಸವಾರರಿಗೆ ತೊಂದರೆಯಾದರೆ ಇಂಜಿನಿಯರ್ ರನ್ನು ನೇರ ಹೊಣೆ ಮಾಡಿ ನಿರ್ದಾಕ್ಷಿಣ್ಯ ಕ್ರಮ : ದಿನೇಶ್ ಗುಂಡೂರಾವ್

Suddi Udaya

ವಾಣಿ ಸೌಹಾರ್ದಕೋ ಆಪರೇಟಿವ್ ಸೊಸೈಟಿ ಮಹಾಸಭೆ

Suddi Udaya

ಗುಂಡೂರಿ: ಕೊಯಂದೂರು ನಿವಾಸಿ ಗಿರಿಜ ನಿಧನ

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya
error: Content is protected !!