23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

ಕುಕ್ಕೇಡಿ ಗ್ರಾಮದ ಕಡ್ತ್ಯಾರು ಸುಡುಮದ್ದು ತಯಾರಿಕ ಘಟಕದಲ್ಲಿ ನಡೆದ ಸ್ಪೋಟದ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೇಟಿ ನೀಡಿದರು. ದುರ್ಘಟನೆ ಯಿಂದ ಮೂವರು ಕಾರ್ಮಿಕರ ಜೀವ ಹಾನಿಯಾಗಿದ್ದು.ಸ್ಪೋಟದಿಂದ ಹಾನಿಯಾದ ಸಮೀಪದ ಮನೆಗಳಿಗೂ ಭೇಟಿ ನೀಡಿದರು.

ನಂತರ ಮಾತನಾಡಿ ಈಗಾಗಲೇ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಆಸ್ಪತ್ರೆಗೆ ಬೇಟಿ ಕೊಟ್ಟಿದ್ದೇನೆ. ಸರಿಸುಮಾರು 24 ಲೈಸೆನ್ಸ್ ತಾಲೂಕಿನಲ್ಲಿ ಇದೆ, ಅದರಲ್ಲಿ ಮೊನ್ನೆ ನಡೆದಂತಹ ಆನೇಕಲ್ಲು ಘಟನೆ ಆದ ಮೇಲೆ ಎಲ್ಲರ ಜಾಗ ಪರಿಶೀಲನೆ ಮಾಡಿದ್ದಾರೆ, ಎಲ್ಲರ ಲೈಸೆನ್ಸ್ ನ್ನು ಕೂಡ ಪರಿಶೀಲನೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ರು. ಮಾರ್ಚ್ ವರೆಗೆ ಲೈಸೆನ್ಸ್ ಅವಕಾಶ ಇತ್ತು ಎಂಬ ಮಾಹಿತಿಯನ್ನು ಕೊಟ್ಟಿದ್ದಾರೆ. ಎಲ್ಲಾ ತನಿಖಾ ತಂಡಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದೆ. ಸುತ್ತಮುತ್ತಲಿನ ಮನೆಗಳಿಗೂ ಭೇಟಿ ಕೊಟ್ಟಿದ್ದೇನೆ, ಹಾನಿಯಾದ ಮನೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತಹ ಕೆಲಸವನ್ನು ಮಾಡುತ್ತೇನೆ. ಅದರೊಂದಿಗೆ ಮೃತ ಕಾರ್ಮಿಕರಿಗೂ ಕೂಡ ಪರಿಹಾರ ಸರ್ಕಾರ ಕೊಡಬೇಕು ಎಂದು ಆಗ್ರಹಿಸಿದರು.

Related posts

ಪಶುಸಂಗೋಪನಾ ಇಲಾಖೆಯ ಅಧಿಕಾರಿ ಜಯಕೀರ್ತಿ ಜೈನ್ ಸೇವಾ ನಿವೃತ್ತಿ

Suddi Udaya

ನಾಳೆ ಬೆಳ್ತಂಗಡಿಗೆ ಜಿಲ್ಲಾಧಿಕಾರಿ ಭೇಟಿ

Suddi Udaya

ಮಚ್ಚಿನ: ಹೆನ್ರಿ ರೋಡ್ರಿಗಸ್ ನಿಧನ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿ ಹಬ್ಬದ ಸಂಭ್ರಮಾಚಾರಣೆ ಆಚರಣೆ

Suddi Udaya

ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಡಾ ರವಿಕುಮಾರ್ ವಿತರಿಸಿದರು.

Suddi Udaya

ಪುದುವೆಟ್ಟು: ಮುಳಿಮಜಲು ನಿವಾಸಿ ಲಕ್ಷ್ಮೀನಾರಾಯಣ ರಾವ್ ನಿಧನ

Suddi Udaya
error: Content is protected !!