29.7 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ಕೊಕ್ಕಡ: ಮಾಯಿಲಕೋಟೆ ಸೀಮೆ ದೈವಸ್ಥಾನ ಟ್ರಸ್ಟ್ (ರಿ.) ಕೊಕ್ಕಡದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆ.ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ.27 ರಂದು ನಾಗಪ್ರತಿಷ್ಠೆ ಜರುಗಿತು.

ನಂತರ ಜ.30 ರಂದು ವಾರ್ಷಿಕ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೈವಗಳಿಗೆ ತಂಬಿಲ ಸೇವೆ, ಸಂಜೆ ಶ್ರೀ ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕೋಟೆ ಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವವು ನಡೆಯಿತು.

ಈ ಸಂದರ್ಭದಲ್ಲಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ. ನ್ಯೂ ಆರಿಗ, ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಜಯಾನಂದ ಬಂಟ್ರಿಯಾಲ್, ಮಾಯಿಲಕೋಟೆ ದೈವಸ್ಥಾನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ಮತ್ತು ಸದಸ್ಯರು ,ಚಂದ್ರಹಾಸ ಪನ್ಯಾಡಿ ಇಂಜಿನಿಯರ್, ದೈವದ ಪರಿಚಾರಕರು ಮತ್ತು ಊರವರು ಉಪಸ್ಥಿತರಿದ್ದರು.

Related posts

ಮೊಗ್ರು – ಮುಗೇರಡ್ಕದಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

Suddi Udaya

ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಶತಮಾನದ ಅದ್ಭುತ ದಂತದ ಶಿಲ್ಪಕಲೆ ಮತ್ತು ಕಲಾಕೃತಿಗಳ ಗ್ಯಾಲರಿಯ ಉದ್ಘಾಟನೆ

Suddi Udaya

ತಾಲೂಕು ಭಜನಾ ಪರಿಷತ್ ನ ಲಾಯಿಲ ವಲಯದ ಭಜನಾ ಮಂಡಳಿಗಳ ಪದಾದಿಕಾರಿಗಳ ಸಭೆ

Suddi Udaya

ಕಳೆಂಜ ಗ್ರಾ.ಪಂ.ನಲ್ಲಿ 68 ಫಲಾನುಭವಿಗಳಿಗೆ ನೀರಿನ ಬ್ಯಾರಲ್ ವಿತರಣೆ

Suddi Udaya

ಮಾ.1 : ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪಕ್ಷ ಸಮಾವೇಶ

Suddi Udaya
error: Content is protected !!