ಶ್ರೀ ವೀರಾಂಜನೇಯ ಸೇವಾ ಸಮಿತಿ ಸಂಸ್ಥೆಯಿಂದ ದಿನನಿತ್ಯ ಬಳಕೆಯ ನೆರವು ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಬಡವರ ಸೇವೆಯೇ ನಮ್ಮ ಧ್ಯೇಯ ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊಂಡು ಶ್ರೀ ವೀರಾಂಜನೇಯ ಸೇವಾ ಸಮಿತಿಯು 7ವರ್ಷ ಪೂರೈಸಿ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಲುವಾಗಿ ಜ.28 ರಂದು ಶ್ರೀ ಮಾತ ಲಕ್ಷಣಿ ವ್ರದ್ಧಾಶ್ರಮ ಫರಂಗಿಪೇಟೆಯಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ನೆರವು ಕಾರ್ಯಕ್ರಮ-2024 ಆಯೋಜಿಸಿದ್ದರು.

ಅಲ್ಲಿನ ವೃದ್ಧಾಶ್ರಮಕ್ಕೆ 15,000ರೂ ಮೌಲ್ಯದ ಗ್ರೈಂಡರ್ ವಿತರಿಸಿದರು ಹಾಗೂ 3,500ರೂ ಮೌಲ್ಯದ ಡೈಪರ್ ಅನ್ನು ವಿತರಿಸಿದರು.

ನಂತರ ಸಮಾಜದಲ್ಲಿ ತಮ್ಮಂತೆಯೇ ಸಮಾಜಸೇವೆ ಮಾಡುವ ಆಯ್ದ 12 ಸಂಘಸಂಸ್ಥೆಗಳಿಗೆ ಗೌರವರ್ಪಣೆ ಮಾಡಿದರು..

ಈ ಸಂದರ್ಭದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಅರ್ಜುನ್ ಬಂಡರ್ಕಾರ್ , ಸ್ಪೂರ್ತಿ ವಿಶೇಷ ಶಾಲೆಯ ಸ್ಥಾಪಕಾಧ್ಯಕ್ಷರಾದ ಪ್ರಕಾಶ್ ಶೆಟ್ಟಿಗಾರ್ , ಆಶ್ರಮದ ಸ್ಥಾಪಕಾಧ್ಯಕ್ಷರಾದ ಹರೀಶ್ ಪೆರ್ಗಡೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!