37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ ಜ.30 ರಂದು ಆಚರಿಸಲಾಯಿತು.

ಮಡಂತ್ಯಾರು ಗ್ರಾ ಪಂ ಅಧ್ಯಕ್ಷೆ ರೂಪ ಎ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‌ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬ ಅಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅತಿಥಿಗಳಾಗಿ ಉಪಾಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ವಿಶ್ವನಾಥ ಪೂಜಾರಿ, ಕಿಶೋರ್ ಕುಮಾರ್, ಪ್ರಗತಿಪರ‌ ಕೃಷಿಕ ಪ್ರಭಾಕರ್, ಬಂಗೇಕಟ್ಟೆ ಮಸೀದಿಯ ಮುಖ್ಯಸ್ಥರಾದ ಯಂ ಆರ್ ಹೈದರ್, ಜೇಸಿಐ ಮಡಂತ್ಯಾರು ಇದರ ಉಪಾಧ್ಯಕ್ಷೆ ಅಮಿತಾ ಬಂಡಾರಿ, ಗ್ರಾಮ ಪಂ ಸಿಬಂದಿ ಪ್ರಮೀಳಾ, ಸಮುದಾಯ ಆರೋಗ್ಯ ಕಾರ್ಯಕರ್ತೆ ಜೆಸ್ಸಿ ಫೆರ್ನಾಂಡಿಸ್, ಆಶಾ ಕಾರ್ಯಕರ್ತೆ ಜಾನಕಿ, ಹೇಮಾವತಿ, ಸುನಂದ ಉಪಸ್ಥಿತರಿದ್ದರು.

ಹನೀಫ್ ಸಾಲುಮರ, ಜಯಂತಿ ಹಾರಬೆ, ಹಕೀಂ ಬಂಗೇರಕಟ್ಟೆ, ಬಿಗ್ ಬ್ರದರ್ಸ ಸಾಲುಮರ ದಾನಿಗಳಾಗಿ ಸಹಕಾರ ನೀಡಿದರು. ಹೇಮಾವತಿ ಶೆಟ್ಟಿ, ಶ್ಯಾಮಲ ಹೆಗ್ಡೆ, ಸ್ತ್ರೀಶಕ್ತಿ ಸದಸ್ಯರು,ಮಕ್ಕಳ ಹೆತ್ತವರು ಅಂಗನವಾಡಿ ಸಹಾಯಕಿ ಊರಿನ ಯುವಕರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು. ಇರ್ಪಾನ್ ಸಾಲುಮರ ಕಾರ್ಯಕ್ರಮ ನಿರೂಪಿಸಿದರು. ಸಮೀಮಾ ಸ್ವಾಗತಿಸಿ, ಸಂದ್ಯಾ ಧನ್ಯವಾದವಿತ್ತರು.

Related posts

ನಮ್ಮ ನಡೆ ಮತಗಟ್ಟೆ ಕಡೆ ಮತದಾರರ ಜಾಗೃತಿ ಆಂದೋಲನ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಪೂರ್ವಧ್ಯಕ್ಷರಾದ ಪ್ರಥ್ವಿರಂಜನ್ ರಾವ್’ರವರ ಶ್ರದ್ಧಾಂಜಲಿ ಸಭೆ

Suddi Udaya

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಿಲ್ಲದ ಕಾಡುಪ್ರಾಣಿಗಳ ಬೇಟೆ

Suddi Udaya

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೀಡಿಯೊ ಹಾಗೂ ಮಾಹಿತಿಪತ್ರ ಅನಾವರಣ

Suddi Udaya

ನ. 23: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ವೇಣೂರು ಕಾರು ಚಾಲಕ ಬೈರಣ್ಣ ನಿಧನ

Suddi Udaya
error: Content is protected !!