38.6 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಜೈನ ಶ್ರಾವಕ, ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

ನಾರಾವಿ: ನಾರಾವಿ ಗ್ರಾಮದ ಭ| 1008 ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 22, 23, 24 ರಂದು ನಡೆಯಲಿರುವುದು. ಈ ಸುಸಂದರ್ಭದ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಗಳ ವಿವರ ಮತ್ತು ನಿಯಮಗಳು ಈ ಕೆಳಗಿನಂತಿದೆ.
1. ಧರ್ಮನಾಥ ಜಿನ ಸಂಗೀತ ಸ್ಪರ್ಧೆ
ಪ್ರಥಮ ಬಹುಮಾನ : 10000 ನಗದು ಮತ್ತು ಸ್ಮರಣಿಕೆ
ದ್ವಿತೀಯ ಬಹುಮಾನ: 8000 ನಗದು ಮತ್ತು ಸ್ಮರಣಿಕೆ
ನಿಯಮಗಳು: ಧರ್ಮನಾಥ ಸ್ವಾಮಿಯ ಹಾಡು / ಭಜನೆಯನ್ನು ಒಬ್ಬರೇ ಹಾಡಿ, ವಿಡಿಯೋ ಮಾಡಿ ಕಳುಹಿಸಬೇಕು. ಸಾಹಿತ್ಯ, ಸ್ವರ, ಹಿನ್ನಲೆ ಸಂಗೀತ, ಛಾಯಾಗ್ರಹಣ ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು., ನೀವು ಕಳುಹಿಸಿದ ಹಾಡು / ಭಜನೆ ಮತ್ತು ಅದರ ವಿಡಿಯೋ ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. ವಿಡಿಯೋದ ಸಮಯ ಕನಿಷ್ಠ 5 ನಿಮಿಷ, ಗರಿಷ್ಠ 8 ನಿಮಿಷಗಳಾಗಿರಬೇಕು.

2. ಪ್ರಬಂಧ ಸ್ಪರ್ಧೆ
ಪ್ರಥಮ ಬಹುಮಾನ: 3000 ನಗದು ಮತ್ತು ಸ್ಮರಣಿಕೆ
ದ್ವಿತೀಯ ಬಹುಮಾನ: 2000 ನಗದು ಮತ್ತು ಸ್ಮರಣಿಕೆ
ನಿಯಮಗಳು: ಪ್ರಬಂಧದ ವಿಷಯ: ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ
ಪ್ರಬಂಧವು 900 ಶಬ್ದಗಳನ್ನು ಮೀರಿರಬಾರದು. ಪ್ರಬಂಧವನ್ನು ಕನ್ನಡ ನುಡಿಯಲ್ಲಿ ಟೈಪ್ ಮಾಡಿ ಪಿಡಿಎಫ್ ಮಾಡಿ ಕಳುಹಿಸತಕ್ಕದು.
ವಿಶೇಷ ಸೂಚನೆ:
1. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ ಮಾರ್ಚ್ 5
2.ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
3. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸುವವರು ತಮ್ಮ ಫೋಟೋ, ವಿಳಾಸ ಮತ್ತು ಮೊಬೈಲ್ ನಂಬರ್‌ಗಳನ್ನು ಜೊತೆಗೆ ಕಳುಹಿಸಬೇಕು.


ವಿಡಿಯೋ ಮತ್ತು ಪ್ರಬಂಧಗಳನ್ನು [email protected] ಗೆ ಮೇಲ್ ಮಾಡಬಹುದು ಅಥವಾ 9481016887 ವಾಟ್ಸಪ್ ನಂಬರ್‌ಗೆ ಕಳುಹಿಸಬೇಕಾಗಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅತುಲ್ ಎಸ್. ಸೇಮಿತ – 9481016887, ಜ್ಞಾನೇಂದ್ರ ಕುಮಾರ್ ಜೈನ್ – 9902799196

Related posts

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ರಸ್ತೆಯ ಇಕ್ಕಲೆಗಳಲ್ಲಿ ಸ್ವಚ್ಛತಾ ಕಾರ್ಯ

Suddi Udaya

ದೇಶಭಕ್ತಿ ಗೀತೆ ಸ್ಪರ್ಧೆ: ಉಜಿರೆ ಶ್ರೀ. ಧ. ಮಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಇಂದಬೆಟ್ಟು: ಬಂಗಾಡಿ ನಿವಾಸಿ ಜ್ವರದಿಂದ ಬಳಲಿ ಅವಿವಾಹಿತ ವಿಶ್ವನಾಥ ನಿಧನ

Suddi Udaya

ಬೆಳ್ತಂಗಡಿ ಕ.ಸಾ.ಪ. ಕ್ಕೆ ಸಂಘಟನ ಕಾರ್ಯದರ್ಶಿಗಳ ನೇಮಕ

Suddi Udaya

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ ನೂತನ ಡಿಸಿಯಾಗಿ ದರ್ಶನ್ ಹೆಚ್ ನೇಮಕ

Suddi Udaya

ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಳ್ಳಿ ಹಬ್ಬ

Suddi Udaya
error: Content is protected !!