28.6 C
ಪುತ್ತೂರು, ಬೆಳ್ತಂಗಡಿ
September 19, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.3: ಬೆಳ್ತಂಗಡಿ ಆರ್.ಜೆ. ಫ್ರೆಂಡ್ಸ್ ಕ್ಲಬ್ ಕಲ್ಲಗುಡ್ಡೆ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ: ಆರ್.ಜೆ. ಫ್ರೆಂಡ್ಸ್ ಕ್ಲಬ್ ಕಲ್ಲಗುಡ್ಡೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ 8 ತಂಡಗಳ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಫೆ.3ರಂದು ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಹತ್ತಿರ ಕಲ್ಲಗುಡ್ಡೆಯಲ್ಲಿ ನಡೆಯಲಿದೆ.


ಕ್ರೀಡಾಂಗಣದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ.
ಆರ್.ಜೆ. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಕೆ. ಮೆಸ್ಕಾಂ ರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರುಗಳಾದ ಕೆ. ಹರೀಶ್ ಕುಮಾರ್, ಪ್ರತಾಪ್‌ಸಿಂಹ ನಾಯಕ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ, ರಾಜೇಶ್ ಶೆಟ್ಟಿ ನವಶಕ್ತಿ, ಉದ್ಯಮಿ ಕಿಶೋರ್ ಕುಮಾರ್ ಬೊಟ್ಯಾಡಿ, ಪುಂಜಾಲಕಟ್ಟೆ ಪಿಎಸ್‌ಐ ನಂದ ಕುಮಾರ್, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಅರ್ಜುನ್ ಕುಮಾರ್, ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಪಿ.ಜಿ., ಪಟ್ಟಣ ಪಂಚಾಯತ್ ಸದಸ್ಯ ಜಯಾನಂದ ಗೌಡ, ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ವಿಂಗ್ಸ್ ಸರ್ವೀಸ್ ಸ್ಟೇಷನ್ ಮಾಲಕ ಹೆನ್ರಿ ಲೋಬೊ, ಪಟ್ಟಣ ಪಂಚಾಯತ್ ಸದಸ್ಯ ಶರತ್ ಕುಮಾರ್, ಲಾಲ ಗ್ರಾ.ಪಂ. ಸದಸ್ಯ ಗಣೇಶ್ ಆರ್ ಲಾಯಿಲ, ಲಾಯಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ ಗೌಡ ಬೆಳಾಲು ಉಪಸ್ಥಿತರಿರುವರು.


ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಸುಬೇದಾರ್ ಮೆ|| ಶಿವಕುಮಾರ್, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ನಿವೃತ್ತ ಮರಣೋತ್ತರ ಪರೀಕ್ಷಕ ಅಂಥೋನಿ ಲಸ್ರದೋ, ಹಿರಿಯ ವಾಲಿಬಾಲ್ ಆಟಗಾರ ಗುರುಪ್ರಕಾಶ್ ಎಂ ಇವರುಗಳನ್ನು ಸನ್ಮಾನಿಸಲಿದ್ದಾರೆ.


ಬಹುಮಾನಗಳ ವಿವರ: ಪ್ರಥಮ- ರೂ.10,024/- ಹಾಗೂ ಆರ್.ಜೆ. ಟ್ರೋಫಿ
ದ್ವಿತೀಯ ರೂ. 7024/- ಹಾಗೂ ಆರ್.ಜೆ. ಟ್ರೋಫಿ
ತೃತೀಯ ರೂ. 2024/- ಹಾಗೂ ಆರ್.ಜೆ. ಟ್ರೋಫಿ
ಚತುರ್ಥ ರೂ. 2024/- ಹಾಗೂ ಆರ್.ಜೆ. ಟ್ರೋಫಿ
ಬೆಸ್ಟ್ ಅಟ್ಯಾಕರ್, ಬೆಸ್ಟ್ ಲಿಬ್ರೊ, ಬೆಸ್ಟ್ ಸೆಟ್ಟರ್, ಬೆಸ್ಟ್ ಅಲ್‌ರೌಂಡರ್ ಹಾಗೂ ಎಮರ್‌ಜಿಂಗ್ ಪ್ಲೇಯರ್ ಆಫ್ ದ ಟೂರ್‌ನಮೆಂಟ್ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು.
ಭಾಗವಹಿಸುವ ಬಿಡ್ಡಿಂಗ್ ತಂಡಗಳು:
ಶ್ರೀದೇವಿ ಎಲೆಕ್ಟ್ರಿಕಲ್ಸ್, ಬೆಳ್ತಂಗಡಿ-ಮಾಲ್ಹಕರು: ಯೋಗೀಶ್
ಚಿನ್ನು ಫ್ರೆಂಡ್ಸ್-ಮಾಲ್ಹಕರು: ಸಂತೋಷ್ ಲಾಯಿಲ
ವೈಟ್ ಲೇಸರ್-ಮಾಲ್ಹಕರು: ಹರ್ಷ ಪಕ್ಕಿದಕಲ
ಸಂಜನ್ ಫೆಂಡ್ಸ್-ಮಾಲ್ಹಕರು: ಶಿವಕುಮಾರ್, ದುಬೈ
ನಾಗಶ್ರೀ ಕನ್ನಾಜೆ-ಮಾಲ್ಹಕರು: ಚರಣ್ ಕನ್ನಾಜೆ
ಸಮರಜಿತ್ ಫ್ರೆಂಡ್ಸ್ ಕ್ಲಬ್ ಬೆಳ್ತಂಗಡಿ-ಮಾಲ್ಹಕರು: ಸುನೀಲ್ ರೈ
ಧರ್ಮಶಾಸ್ತ್ರ ಮಲೆಬೆಟ್ಟು- ಮಲೆಬೆಟ್ಟು: ಗರೀಶ್, ಮಲೆಬೆಟ್ಟು
ಅದ್ನಾನ್ ವಾರಿಯರ್‍ಸ್-ಮಾಲ್ಹಕರು: ನವಾಬ್ ಶರೀಫ್

Related posts

ಉಜಿರೆ : ಬೆನಕ ಹೆಲ್ತ್ ಸೆಂಟರ್ ವತಿಯಿಂದ ಬದನಾಜೆ ಸ.ಉ.ಪ್ರಾ. ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಖ್ಯಾತ ಕಲಾವಿದ ಗಣೇಶ್ ಗುಂಪಲಾಜೆರವರಿಗೆ ಗಣೇಶೋತ್ಸವದ ಗಣಪತಿ ರಚನೆಯಲ್ಲಿ ಪ್ರಥಮ ಸ್ಥಾನ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಕುಣಿತ ಭಜನೆಯ ಕುರಿತು ಅವಹೇಳನ ಬರಹ : ಸೂಕ್ತ ಕಾನೂನು ಕ್ರಮಕ್ಕಾಗಿ ಕುಣಿತ ಭಜನಾ ತರಬೇತುದಾರರಿಂದ ಧರ್ಮಸ್ಥಳ ಠಾಣೆಯಲ್ಲಿ ದೂರು

Suddi Udaya

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ, ನಾಲ್ಕೂರು ಗ್ರಾಮಸ್ಥರ ಸಮಾಲೋಚನ ಸಭೆ

Suddi Udaya

ಕಕ್ಕಿಂಜೆ ಶಾಲಾ ಪ್ರಾರಂಭೋತ್ಸವ : ಪೋಷಕರಿಗೆ ಮಾರ್ಗದರ್ಶನ

Suddi Udaya

ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ ಪಂದ್ಯಾಟ : ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!