July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪರೀಕ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ‘ನವಚೇತನ’ ಶಿಬಿರ: ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ

ಪರೀಕ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ಉಡುಪಿ ಜಿಲ್ಲಾ ಪೊಲೀಸರ ‘ನವಚೇತನ’ ಶಿಬಿರ ಕಾರ್ಯಕ್ರಮದ ಅಂಗವಾಗಿ ಇಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್‌ರವರು ವ್ಯಸನಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ಮಾತನಾಡಿ ಅವರ ಸಮಾಜಿಕ ಕಳಕಳಿಯ ನುಡಿಗಳು ಈಗಾಗಲೇ ಸಹಸ್ರಾರು ಮಾದಕ ವ್ಯಸನಿಗಳನ್ನು ಪುನಃ ಸ್ವಸ್ಥ ಮತ್ತು ಸ್ವಚ್ಛ ಬದುಕಿನೆಡೆಗೆ ಮುಖ ಮಾಡಿ ನಿಲ್ಲುವಂತೆ ಮಾಡಿದೆ ಎನ್ನುವುದು ಉಲ್ಲೇಖನೀಯವಾದ ವಿಷಯ. ಸಪ್ತ ವ್ಯಸನಗಳಲ್ಲಿ ಮೊದಲನೆಯದೇ ಮದ್ಯಪಾನ ಎಂದು ಹೇಳಲಾಗುತ್ತದೆ. ಅಮಲಿನ ಭ್ರಮೆ ಮನುಷ್ಯನ ಆರ್ಥಿಕ, ಸಮಾಜಿಕ, ಸಾಂಸರಿಕ ಬದುಕಿನ ಸ್ಥಾನಮಾನವನ್ನು ನಾಶ ಮಾಡಿ ಆತನನ್ನು ಅತೀ ಕೀಳು ಮಟ್ಟಕ್ಕೆ ಇಳಿಸುತ್ತದೆ. ಜೀವನವನ್ನು ಸಂಪೂರ್ಣವಾಗಿ ಆವರಿಸಿ ಬದುಕನ್ನೇ ನಾಶ ಮಾಡುವ ಶಕ್ತಿ ವ್ಯಸನಕ್ಕಿದೆ. ಕುಡಿತ, ಅಮಲು ಪದಾರ್ಥ ಸೇವನೆ ಸಮಾಜಕ್ಕಂಟಿದ ಶಾಪ. ಮಾದಕ ವಸ್ತು, ತಂಬಾಕು ಸೇವನೆ, ಮದ್ಯಪಾನ ಇಂದು ಯುವಜನಾಂಗವನ್ನು ದೊಡ್ಡಮಟ್ಟದಲ್ಲಿ ಅಧಪತನದೆಡೆಗೆ ತಳ್ಳುತ್ತಾ ಇದೆ. ದುಡಿಮೆ ದುಶ್ಚಟಗಳಿಗೆ ವಿನಿಯೋಗವಾಗುತ್ತಿದೆ, ಕುಡಿತ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಆ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಮದ್ಯಮುಕ್ತ ವ್ಯಸನಿಗಳ ಶಿಬಿರವು ಪೂಜ್ಯ ಡಾ। ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾವಿರಾರು ಶಿಬಿರಗಳನ್ನು ಸಂಘಟಿಸಿ ಸಮಾಜದ ದೊಡ್ಡ ಪಿಡುಗಾದ ಮದ್ಯವ್ಯಸನದಿಂದ ಅದೆಷ್ಟೋ ಕುಟುಂಬಗಳನ್ನು ಮುಕ್ತಗೊಳಿಸಿ ಉತ್ತಮ ಜೀವನವನ್ನು ನಡೆಸುವಂತಾಗಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ರವರ ಮುತುವರ್ಜಿಯಿಂದ ಆಯೋಜನೆಗೊಂಡಿರುವ ನವಚೇತನ ಶಿಬಿರದ ಹದಿನೈದನೇ ದಿವಸದಲ್ಲಿ ಈ ಕಾರ್ಯಕ್ರಮವು ಪರೀಕ ಸೌಖ್ಯವನದ ಕ್ಷೇಮ ಹಾಲ್‌ನಲ್ಲಿ ಸಂಯೋಜನೆಗೊಂಡಿತು.

ಮುಖ್ಯವೈದ್ಯಾಧಿಕಾರಿಯವರಾದ ಡಾ|| ಗೋಪಾಲ ಪೂಜಾರಿಯವರು ಸೌಖ್ಯವನದಲ್ಲೂ ಜನರನ್ನು ವ್ಯಸನಮುಕ್ತರಾಗುವಂತೆ ಪ್ರಕೃತಿ ಚಿಕಿತ್ಸಾ ವಿಧಾನವನ್ನು ಅನುಸರಿಸಿ ಉಪಚರಿಸಲಾಗುವುದು ಎಂದರು.

ಶಾಂತಿವನ ಟ್ರಸ್ಟ್ (ರಿ.) ಧರ್ಮಸ್ಥಳ ಇದರ ಕಾರ್ಯದರ್ಶಿ ಬಿ ಸೀತಾರಾಮ ತೋಳಾಡಿತ್ತಾಯರವರ ಉಪಸ್ಥಿತರಿದ್ದು ವಿನ್ಸೆಂಟ್ ಪಯಾಸ್‌ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಿದರು. ಸುಮಾರು 90 ಮಂದಿ ಪೊಲೀಸ್ ಸಿಬ್ಬಂದಿಗಳು, ಆಸ್ಪತ್ರೆಯಲ್ಲಿ ದಾಖಲಾಗಿರುವ ಸಾಧಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಪ್ರವೀಣ್ ಕುಮಾ‌ರ್ ಇವರು ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ನಿರೂಪಿಸಿದರು.

Related posts

ಮೇ 14ರಿಂದ 24ರವರೆಗೆ ಕುಲಶೇಖರ ವೀರನಾರಾಯಣ ದೇವರಿಗೆ ಬ್ರಹ್ಮಕಲಶದ ವೈಭವ : ರೂ. 10 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ: ಪತ್ರಿಕಾಗೋಷ್ಠಿಯಲ್ಲಿ ಮಯೂರ್ ಉಳ್ಳಾಲ್ ಮಾಹಿತಿ

Suddi Udaya

ಮುಂಡಾಜೆ ಸೀಟು ಬಳಿಯ ಸಿಸಿ ಕ್ಯಾಮೆರಾ ಎಗರಿಸಿದ ಕಳ್ಳರು

Suddi Udaya

ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ವತಿಯಿಂದ ಅಸಮರ್ಪಕ ಹಾಗೂ ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ

Suddi Udaya

ಸೆ.22-ಅ.2: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya

ಬೆಳ್ತಂಗಡಿ ಬಂಗೇರ ಬಿಗ್ರೇಡ್ ವತಿಯಿಂದ ಶ್ರೀಮತಿ ಬಿನುತಾ ಬಂಗೇರರ ಸಾರಥ್ಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಹಬ್ಬ ಕೇವಲ ಎರಡೇ ದಿನಗಳು ಬಾಕಿ

Suddi Udaya
error: Content is protected !!