ನಾರಾವಿ ಪಾಣಾಲು ರಸ್ತೆ ವಿಶ್ವಕರ್ಮ ಮಂದಿರದ ಬಳಿ ಅರ್ಪಿತಾ ಕಾಂಪ್ಲೆಕ್ಸ್ ನಲ್ಲಿ ಸನ್ನಿಧಿ ಟೈಲರಿಂಗ್ ಸೆಂಟರ್ ಫೆ.2 ರಂದು ಶುಭಾರಂಭಗೊಂಡಿತು.
ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ನಿಕಟಪೂರ್ವ ಉಪಾಧ್ಯಕ್ಷ ಉದಯ್ ಹೆಗ್ಡೆ, ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ, ಕಟ್ಟಡದ ಮಾಲಕರಾದ ನಿತ್ಯಾನಂದ ಪೂಜಾರಿ ಮತ್ತು ಸಂಸ್ಥೆಯ ಮಾಲಕ ಪ್ರಕಾಶ್ ಆಚಾರ್ಯರ ಮಾತೃಶ್ರೀಯವರಾದ ಚಂದ್ರಾವತಿ ಇವರುಗಳು ದೀಪವನ್ನು ಬೆಳಗಿಸಿ ನೂತನ ಟೈಲರಿಂಗ್ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕಿ ಶ್ರೀಮತಿ ಸುಪ್ರಿಯಾ ಪ್ರಕಾಶ್ ಆಚಾರ್ಯ ಮತ್ತು ಬಂಧು ಬಳಗದವರು ಹಾಗೂ ಊರ-ಪರ ಊರ ಗಣ್ಯರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರನ್ನು ಸ್ವಾಗತಿಸಿ ಧನ್ಯವಾದಗೈದರು.
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ತಂತ್ರಿಯವರು ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಗ್ರಾಹಕ ಬಂಧುಗಳು ನೂತನ ಸಂಸ್ಥೆಯಲ್ಲಿ ಮಹಿಳೆಯರಿಗೆ ಉಪಯೋಗವಾಗುವ ಡಿಸೈನಿಂಗ್ ಬ್ಲೌಸ್, ಚೂಡಿದಾರ್, ಲೆಹಂಗಾ, ಫಾಲ್, ಗೊಂಡೆ, ಜಿಗ್ ಜಾಗ್ ಮುಂತಾದವುಗಳ ಹೊಲಿಗೆಯ ಅತ್ತ್ಯುತ್ತಮ ಸೇವೆಯ ಸದುಪಯೋಗವನ್ನು ಪಡೆದುಕೊಂಡು ಸಂಸ್ಥೆಯ ಏಳಿಗೆಗೆ ತಮ್ಮೊಂದಿಗೆ ಕೈ ಜೋಡಿಸಿ ಸಹಕರಿಸಬೇಕೆಂದು ಮಾಲಕಿ ಶ್ರೀಮತಿ ಸುಪ್ರಿಯಾ ಪ್ರಕಾಶ್ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.