ಪಡಂಗಡಿ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.03 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಆವರಣದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸ್ ಗಳ ಅಭಾವವಿದೆ ಹಾಗೂ ಆಂಬುಲೆನ್ಸ್ ಸರಿಯಾದ ವ್ಯವಸ್ಥೆಯನ್ನು ನೀಡುತ್ತಿಲ್ಲ. ಜನರ ಸೇವೆಗೆ ಬಾರದ ಆಂಬುಲೆನ್ಸ್ ಅಗತ್ಯವಿಲ್ಲ ಎಂದು ಗ್ರಾಮಸ್ಥರೊಬ್ಬರು ಆಗ್ರಹ ವ್ಯಕ್ತಪಡಿಸಿದರು. ಹಾಗೂ ಪೊಯ್ಯೇಗುಡ್ಡೆಗೆ ವ್ಯವಸ್ಥಿತ ಬಸ್ ಸ್ಟಾಂಡ್ ನಿರ್ಮಿಸಬೇಕು ಹಾಗೂ ಮಹಿಳೆಯರಿಗೆ ಉಪಯೋಗ ಆಗುವ ದೃಷ್ಟಿಯಿಂದ ಶೌಚಾಲಯ ನಿರ್ಮಿಸಬೇಕೆಂದು ಆಗ್ರಹಿಸಿದರು.
ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದೆ ಇರುವುದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗ್ರಾ. ಪಂ.ಅಧ್ಯಕ್ಷ ವಸಂತ ಪೂಜಾರಿ ವಿಷಾದ ವ್ಯಕ್ತಪಡಿಸಿದರು.
3 ಜನ ಗ್ರಾಮಸ್ಥರಿಗೆ ಮರಣ ಸಾಂತ್ವನ ನಿಧಿ ಹಾಗೂ ವೈದ್ಯಕೀಯ ನೆರವು ಚೆಕ್ ನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ವಸಂತಿ, ಪಂಚಾಯತ್ ಸದಸ್ಯರಾದ ಸಂತೋಷ ಕುಮಾರ್,ಶ್ರೀಮತಿ ವಿನೋದ, ಕುಮಾರಿ ಶಕುಂತಳ, ಶ್ರೀಮತಿ ಗಾಯತ್ರಿ, ರಿಚಾರ್ಡ್ ಗೋವಿಯಸ್, ಹಾಮದ್ ಬಾವ, ಶ್ರೀಮತಿ ವನಜಾಕ್ಷಿ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಸುಮತಿ ಪಿ,ಶ್ರೀಮತಿ ಶುಭ, ಹರೀಶ್ ಕುಮಾರ್, ಶ್ರೀಮತಿ ಕವಿತಾ, ಅಶೋಕ್, ಯೋಗೀಶ್ ಡಿ. ಪಿ, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಫನಾ ಸ್ವಾಗತಿಸಿದರು. ಕಾರ್ಯದರ್ಶಿ ತಾರಾನಾಥ ನಾಯ್ಕ್ ಕೆ. ಕಾರ್ಯಕ್ರಮ ನಿರ್ವಹಿಸಿ ಹಾಗೂ ಕಳೆದ ಗ್ರಾಮ ಸಭೆಯ ನಡವಳಿಗಳ ಬಗ್ಗೆ ಅನುಪಾಲನ ವರದಿ ವಾಚಿಸಿ, ಧನ್ಯವಾದವಿತ್ತರು.
ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.