September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಡಯಾಲಿಸಿಸ್ ಕೇಂದ್ರದ ಕೊರತೆಗಳಿಗೆ ಮುಕ್ತಿ : ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ರೋಟರಿ ಸಂಸ್ಥೆಯವರಿಗೆ ಬಂಗೇರರವರಿಂದ ಅಭಿನಂದನೆ

ಬೆಳ್ತಂಗಡಿ : ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲೊoದು ಸಮಸ್ಯೆಗಳಿoದ ಹೆಸರು ಕೆಡಿಸಿಕೊಂಡಿದ್ದ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯ ಡಯಾಲಿಸಿಸ್ ಘಟಕದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಸಚಿವರ ಆಪ್ತ ಕಾರ್ಯದರ್ಶಿ ಕೆ. ಎ ಹಿದಾಯತುಲ್ಲ, ಜಿಲ್ಲಾ ಆರೋಗ್ಯಧಿಕಾರಿ ಡಾl. ಎಚ್ ಆರ್ ತಿಮ್ಮಯ್ಯ ರವರುಗಳಿಗೆ ಸಂತ್ರಸ್ತರ ಪರವಾಗಿ ಮತ್ತು ತಾಲೂಕಿನ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿರುವುದಾಗಿ ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಘಟಕಕ್ಕೆ ನಾಲ್ಕು ಡಯಾಲಿಸಿಸ್ ಯಂತ್ರಗಳು ಮತ್ತು ಏಳು ಸಾವಿರ ಲೀಟರ್ ಸಾಮರ್ಥ್ಯದ ಆರ್ ಓ ಯುನಿಟ್ ಅನ್ನು ಕೊಡುಗೆಯಾಗಿ ನೀಡಿದ ರೋಟರಿ ಕ್ಲಬ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಅನಂತ ಭಟ್ ಮಚ್ಚಿಮಲೆ, ನ್ಯಾಯವಾದಿ ಬಿ. ಕೆ ಧನಂಜಯ ರಾವ್ ಮತ್ತು ಎಲ್ಲಾ ಪದಾಧಿಕಾರಿಗಳಿಗೆ, ರೋಟರಿ ಕ್ಲಬ್ ಇಂದಿರಾನಗರ – ಬೆಂಗಳೂರಿನ ಅಧ್ಯಕ್ಷರಾದ ಬಾಲಕೃಷ್ಣನ್ ಮತ್ತು ಜಗದೀಶ್ ರಾವ್, ಮುಗುಳಿ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿರುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಲಾಯಿಲ: ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಟೇಬಲ್ ಟೆನ್ನಿಸ್ ಪಂದ್ಯಾಟ: ಪ್ರಸನ್ನ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾಬಂಧನ ಆಚರಣೆ

Suddi Udaya

ನಾಳ ಗೋಪಾಲಕೃಷ್ಣ ಕಾಮತ್ ನಿಧನ

Suddi Udaya

ಕುಸಿಯುವ ಮೊದಲು ಹೊಸ ಸೇತುವೆ ನಿರ್ಮಾಣವಾಗುವುದೇ…? ಚುನಾವಣೆ ಬಹಿಷ್ಕಾರ ಹಾಕಿದರೂ ಕ್ಯಾರೇ ಅನ್ನದ ಅಧಿಕಾರಿಗಳು…!!!

Suddi Udaya

ಇಂದಬೆಟ್ಟು: ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ: ಹಾನಿ

Suddi Udaya
error: Content is protected !!