25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯ ಸಿಮ್ ಕಾರ್ಡ್ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು

*.ಧರ್ಮಸ್ಥಳ ಪೊಲೀಸರು ಧರ್ಮಸ್ಥಳ ಬಸ್ ಸ್ಟ್ಯಾಂಡ್ನಲ್ಲಿ ಐದು ಜನ ಆರೋಪಿಗಳು ಅಕ್ರಮವಾಗಿ 42 ಮೊಬೈಲ್ ಸಿಮ್ ಗಳನ್ನು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ಸಂಖ್ಯೆ 5 /2024 ರಂತೆ ಎಪ್. ಐ.ಆರ್ ದಾಖಲಿಸಿ ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದು.ಮಾನ್ಯ ನ್ಯಾಯಾಲಯಕ್ಕೆ ಆರೋಪಿಗಳ ಪರ ವಕೀಲರು ಒಬ್ಬ ವ್ಯಕ್ತಿಯು ಕಾನೂನು ರೀತಿಯಲ್ಲಿ 9 ಸಿಮ್ ಕಾರ್ಡ್ ಗಳನ್ನು ಹೊಂದಬಹುದು ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದು, ಆರೋಪಿಗಳ ಪರ ವಕೀಲರ ವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಧರ್ಮಸ್ಥಳ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮೇಲ್ನೋಟಕ್ಕೆ ಯಾವುದೇ ಸತ್ಯ ಸತ್ಯತೆಗಳು ಇಲ್ಲದಿರುವ ಕಾರಣ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ.

ಪ್ರಕರಣದಲ್ಲಿ ಆರೋಪಿಯ ಪರವಾಗಿ ಲೆಕ್ಸ್ ವಿಷನ್ ಲಾ ಚೇಂಬರ್ಸ್ (ಬೆಳ್ತಂಗಡಿ ಹಾಗೂ ಬೆಂಗಳೂರು) ನ ನ್ಯಾಯವಾದಿಗಳಾದ ನವಾಜ್ ಶರೀಫ್ ಎ, ಮಮ್ತಾಜ್ ಬೇಗಂ, ಇರ್ಷಾದ್, ಮತ್ತು ಸಪ್ನಾಝ ಇವರನ್ನು ಒಳಗೊಂಡ ವಕೀಲರು ತಂಡ ವಾದಿಸಿದ್ದರು.

Related posts

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೀಡಿಯೊ ಹಾಗೂ ಮಾಹಿತಿಪತ್ರ ಅನಾವರಣ

Suddi Udaya

ಶಿಶಿಲ: ಆಚಾರಿಪಾಲ್ ನಿವಾಸಿ ರಘುರಾಮ ಗೋಖಲೆ ನಿಧನ

Suddi Udaya

ಉಜಿರೆ:ಅನಾಥ ಶವವನ್ನು ಪೊಲೀಸರಿಗೆ ಒಪ್ಪಿಸಿದ ಸ್ವಯಂಸೇವಕರು

Suddi Udaya

ಮಾಲಾಡಿಯ ಜೆನಿನ್ ಡಿಸೋಜರವರಿಗೆ ಬಿ.ಎ.ಎಸ್.ಎಲ್.ಪಿ ಯಲ್ಲಿ ಮೂರನೇ ರ್‍ಯಾಂಕ್

Suddi Udaya

ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ : -ವಿಶಿಷ್ಟ ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

Suddi Udaya

ಚಾರ್ಮಾಡಿ: ರಸ್ತೆ ಬದಿ ಅರಣ್ಯಕ್ಕೆ ಮಗುಚಿ ಬಿದ್ದ ಐಸ್ ಕ್ರೀಂ ಸಾಗಾಟದ ವಾಹನ

Suddi Udaya
error: Content is protected !!