25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ‘ಸ್ನೇಹ ಸಂಗಮ’ ಕಾರ್ಯಕ್ರಮ

ಬೆಳ್ತಂಗಡಿ : ಇಲ್ಲಿನ ಸರ್ಕಾರಿ ನೌಕರರ ಭವನದ ಏಕತಾ ಸೌಧದ ಸಭಾಂಗಣದಲ್ಲಿ ಫೆ.03 ರಂದು ತಾಲೂಕಿಗೆ ಹೊಸದಾಗಿ ನೇಮಕಾತಿಯಾಗಿ ಬಂದಿರುವ ನೂರಕ್ಕೂ ಹೆಚ್ಚು ಪದವೀಧರ ಪ್ರಾಥಮಿಕ ಶಿಕ್ಷಕರನ್ನು (6-8) ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ಸ್ವಾಗತಿಸುವ ಹಾಗೂ ಹಿರಿಯ ಜಿಪಿಟಿ ಶಿಕ್ಷಕ ಮಿತ್ರರೆಲ್ಲರನ್ನೂ ಒಗ್ಗೂಡಿಸುವ ‘ಸ್ನೇಹ ಸಂಗಮ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ನೆರವೇರಿಸಿದರು. ನಂತರ ಮಾತನಾಡಿದ ಅವರು “ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಎಲ್ಲರೂ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿಸಬೇಕು” ಎಂದು ಕರೆ ಕೊಡುವುದರೊಂದಿಗೆ ತಾಲೂಕಿಗೆ ಹೊಸದಾಗಿ ನೇಮಕವಾಗಿರುವ ಎಲ್ಲಾ ಶಿಕ್ಷಕರಿಗೂ ಶುಭ ಹಾರೈಸಿದರು ಮತ್ತು ಸಮಾಜ ವಿಜ್ಞಾನ ನಿಯೋಜಿತ ಶಿಕ್ಷಕರ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಶ್ರಮಿಸುವುದಾಗಿ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, “ನಿಮ್ಮ ಸಮಸ್ಯೆಗಳಿಗೆ ನಾನು ಸದಾ ಗಟ್ಟಿ ಧ್ವನಿಯಾಗಿ ನಿಂತು , ಅವುಗಳನ್ನು ತುರ್ತಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿ; ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹಾಗೂ ಶಿಕ್ಷಕರ ಅವಸ್ಥೆಗಳ(ಪರಿಸ್ಥಿತಿಗಳ)ಬಗ್ಗೆ ಮರುಕ ವ್ಯಕ್ತಪಡಿಸಿ ಮೌಲ್ಯಯುತ, ಗುಣಾತ್ಮಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾತನಾಡಿದರು. ನಂತರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿಯವರು ಮಾತನಾಡಿ ನೂತನ ಜಿಪಿಟಿ ಶಿಕ್ಷಕರಿಗೆ ಸೇವಾ ಪುಸ್ತಕ ಹಾಗೂ ಎಚ್.ಎಂ.ಆರ್.ಎಸ್ ತಂತ್ರಾಂಶದ ಮಾಹಿತಿ ತೆರೆಯಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.


ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮೋಹನ್ ಕುಮಾರ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗಂಗಾರಾಣಿ, ಪ್ರಾ.ಶಾ.ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ಕಿಶೋರ್ ಕುಮಾರ್, ಪ್ರಾ.ಶಾ.ಮುಖ್ಯ ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ಎಡ್ವರ್ಡ್ ಡಿಸೋಜ, ದ.ಕ ಪ್ರೌ.ಶಾ.ಸ.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಮದ್ ರಿಯಾಜ್, ಪ್ರೌ.ಶಾ.ಸ.ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ರಾಧಾಕೃಷ್ಣ ಕೆಯ್ಯೂರು, ಟಿಜಿಟಿ ಶಿಕ್ಷಕರ ಸಂಘದ ತಾ.ಪ್ರ.ಕಾರ್ಯದರ್ಶಿಗಳಾದ ವಿಕಾಸ ಕುಮಾರ್ ಉಪಸ್ಥಿತರಿದ್ದು ನೂತನ ಜಿಪಿಟಿ ಶಿಕ್ಷಕರಿಗೆ ಸ್ವಾಗತಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ ) ಸಂಘದ ಅಧ್ಯಕ್ಷ ಯೋಗೇಶ ಹೆಚ್.ಆರ್ ನೂತನ ಜಿಪಿಟಿ ಶಿಕ್ಷಕರಿಗೆ ಸ್ವಾಗತ ಕೋರಿ, ಅವರ ಸಮಸ್ಯೆಗಳಿಗೆ ಸಂಘ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಡಿಂಜೆ ಶಾಲೆಯ ಜಿಪಿಟಿ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಮಟ್ಟದ ರಾಷ್ಟ್ರೀಯ ಕಬಡ್ಡಿ ಆಟಗಾರರು ಆದ ಕವನ್ ಕುಮಾರ್ ಇವರನ್ನು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಿವೃತ್ತ ಪ್ರ.ದ.ಸಹಾಯಕರಾದ ನಾರಾಯಣ್ ನಾಯ್ಕ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜಿಪಿಟಿ ಸಂಘದ ಉಪಾಧ್ಯಕ್ಷ ಶುಭವಿಕಾಸ್ ಪ್ರಾರ್ಥಿಸಿ , ಖಜಾಂಚಿ ಅಭಿಷೇಕ್ ಆರ್.ಎನ್ ಸ್ವಾಗತಿಸಿ, ವಕ್ತಾರರಾದ ಸತೀಶ್ ಆಚಾರ್ ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಖಜಾಂಚಿ ಹಾಗೂ ತಾ.ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಬಿ ಆರ್ ಪ್ರಾಸ್ತಾವಿಕ ನುಡಿದರು. ಸಂಘದ ನಿರ್ದೇಶಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ರವಿಕುಮಾರ್ ಜೆ ವಂದಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್ ಬಂಕೊಳ್ಳಿ , ನಿರ್ದೇಶಕರಾದ ಮಧು ಕೆ.ಎಸ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾದ ಶಾರದಾ ಅಗತ್ಯ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Suddi Udaya

ಬಂದಾರಿನಲ್ಲಿ ಸಿಡಿಮದ್ದು ಸ್ಫೋಟಗೊಂಡು ಆಟವಾಡುತ್ತಿದ್ದ ಬಾಲಕನಿಗೆ ಗಾಯ

Suddi Udaya

ಸುಲ್ಕೇರಿ ಗ್ರಾ.ಪಂ. ವತಿಯಿಂದ ಸ್ವಾಮಿ ವಿವೇಕಾನಂದರ ಪುತ್ಥಳಿ ಲೋಕಾರ್ಪಣೆ

Suddi Udaya

ಗೇರುಕಟ್ಟೆ: ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕೆ

Suddi Udaya

ಎ. 28 – ಮೇ.2: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೇಸಿಗೆ ಶಿಬಿರ: ಬೇಸಿಗೆ ರಜೆ ಕಳೆಯಲು ಸುಮಾರು 50 ಚಿಣ್ಣರಿಗೆ ಅವಕಾಶವಿದೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ: ತೋರಣ ಮುಹೂರ್ತ, ಧ್ವಜಾರೋಹಣ

Suddi Udaya
error: Content is protected !!