ಸುಪ್ರೀಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್- ಫರ್ನಿಚರ್ಸ್ 3 ಲಕ್ಕಿ ಸ್ಕಿಂ ನ ಗ್ರ್ಯಾಂಡ್ ಫಿನಾಲೆ

Suddi Udaya

ಬೆಳ್ತಂಗಡಿ: ಕಳೆದ 16 ವರ್ಷಗಳ ಹಿಂದೆ ಆರಂಭವಾಗಿರುವ ಸುಪ್ರೀಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯು ನಗುಮೊಗದ ಸೇವೆ, ವಿಶ್ವಾಸಾರ್ಹ ಉದ್ಯಮ ನಡೆಸುವ ಮೂಲಕ ಬೆಳವಣಿಗೆಯ ಹಾದಿ ಹಿಡಿದಿದೆ. ಇಲ್ಲಿ ಕನಿಷ್ಟ ದರಕ್ಕೆ ನಮ್ಮ ತೃಪ್ತಿಯ ಸಾಧನಗಳು ಲಭಿಸುತ್ತದೆ. ಸಂಸ್ಥೆ ಕಟ್ಟಿ ಇಂದು 30 ಮಂದಿಗೆ ಉದ್ಯೋಗದಾತರಾಗಿಯೂ ಬೆಳೆದಿರುವುದು ಸಂತಸದಾಯಕ ಎಂದು ಕಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಹೇಳಿದರು.


ಗುರುವಾಯನಕೆರೆ ಸುಪ್ರೀಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್- ಫರ್ನಿಚರ್ಸ್ ಮಳಿಗೆಯ ಮೂರನೇ ಲಕ್ಕಿ ಸ್ಕೀಂ ನ ಗ್ರ್ಯಾಂಡ್ ಫಿನಾಲೆ, ಮತ್ತು 4 ನೇ ಸೀಝನ್‌ನ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಅವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕುವೆಟ್ಟು ಸರಕಾರಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಸಜ್ ಚಿಲಿಂಬಿ, ಖ್ಯಾತ ಛಾಯಾಗ್ರಾಹಕ ಪಾಲಾಕ್ಷ ಸುವರ್ಣ, ಎಸ್.ಎಂ.ಎಸ್ ಶಾಮಿಯಾನದ ಮಾಲಿಕ ಅಬ್ದುಲ್ ಲೆತೀಫ್ ಹಾಜಿ ಮಾತನಾಡಿ, ಸಂಸ್ಥೆಯ ಸೇವೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಶುಭ ಕೋರಿದರು. ಕಟ್ಟಡದ ಮಾಲಿಕ ಫೆಲಿಕ್ಸ್ ಡಿಸೋಜಾ, ಕುವೆಟ್ಟು ಗ್ರಾ.ಪಂ ಸದಸ್ಯ ಮುಸ್ತಫಾ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಸುಪ್ರಿಂ ಸಮೂಹ ಸಂಸ್ಥೆಗಳ ಮಾಲಕ ಎಮ್ ಅಬ್ದುಲ್ಲ ವಹಿಸಿದ್ದರು.

ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು.
ಮಳಿಗೆಯ ಮಾಲಿಕ ಝಬೈರ್ ಸ್ವಾಗತಿಸಿ, ಪ್ರಸ್ತಾವನೆಗೈದರು.

ಲಕ್ಕಿ ಡ್ರಾದಲ್ಲಿ ಅಬ್ದುಲ್ ಅಝೀಜ್ ಕಿಲ್ಲೂರು ಅವರು ಗ್ರ್ಯಾಂಡ್ ಫಿನಾಲೆಯಲ್ಲಿ 11 ಗ್ರಾಂ ಚಿನ್ನ ಗೆದ್ದುಕೊಂಡರು. ಉಳಿದ 10 ಮಂದಿಗಳಾದ 198—ಅಬ್ಬಾಸ್, 549–ಅರುಣ್ ಸುನ್ನತ್ ಕೆರೆ, 227-ಶೇಖರ್ ಶೆಟ್ಟಿ ಉಪ್ಪಡ್ಕ, 307-ಶಾಹುಲ್ ಹಮೀದ್ ವೇಣೂರು,195-ಜಾಬಿರ್ ಕುಪ್ಪೆಟ್ಟಿ, 384-ಪ್ರೀತಿ ವಾಣಿ ಸ್ಕೂಲ್ ಬೆಳ್ತಂಗಡಿ, 78-ಸ್ವಫಾ, 446-ಸುಹಾಸಿನಿ ಮದ್ದಡ್ಕ, 521-ಸಫ್ರೀನಾ ಮತ್ತು 472-ಅಹಮದ್‌ಕುಂಞಿ ಇವರುಗಳು ಆಕರ್ಷಕ ಬಹುಮಾನ ತಮ್ಮದಾಗಿಸಿಕೊಂಡರು. ಸ್ಥಳದಲ್ಲೇ ಆರಿಸಿಬಂದ ಅದೃಷ್ಟವಂತ ಗ್ರಾಹಕರಾಗಿ ಅಬೀಕ್ಷಾ ಮೂಡಿ ಬಂದು ಚಿನ್ನದ ಉಂಗುರ ಬಹುಮಾನ ಪಡೆದರು.

Leave a Comment

error: Content is protected !!