24.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸೇವಾಭಾರತಿಗೆ ಅಂಬ್ಯುಲೆನ್ಸ್ ಕೊಡುಗೆ

ಉಜಿರೆ: : ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್, ಮೈಸೂರು  ಇವರಿಂದ  2023-24 ನೇ ಸಾಲಿನ  ಸಿ. ಎಸ್. ಆರ್ ಅನುದಾನದಡಿಯಲ್ಲಿ  ಕನ್ಯಾಡಿಯ ಸೇವಾಭಾರತಿ ಸಂಸ್ಥೆಗೆ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ  ಫೆಬ್ರವರಿ 5 ರಂದು ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್  ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್  ಸಂಸ್ಥೆಯ  ಸೀನಿಯರ್ ಜನರಲ್ ಮ್ಯಾನೇಜರ್   ಕೆ. ನಾರಾಯಣನ್ ರವರು ಆಂಬುಲೆನ್ಸ್ ಕೀ ಯನ್ನು ಸೇವಾಭಾರತಿ  ಸಂಸ್ಥೆಯ ಸೀನಿಯರ್ ಮ್ಯಾನೇಜರ್  ಚರಣ್ ಕುಮಾರ್ ಎಂ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ  ಬ್ಯಾಂಕಿನ  ಸಿ. ಎಸ್. ಆರ್. ವಿಭಾಗದ ಜನರಲ್ ಮ್ಯಾನೇಜರ್   ಪ್ರಮೋದ್ ಕುಮಾರ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ ನ  ಹಿರಿಯ ಅಧಿಕಾರಿವರ್ಗದವರು, ಸೇವಾಭಾರತಿಯ ಸ್ವಯಂ ಸೇವಕ ಚಂದನ್ ಗುಡಿಗಾರ್ ಉಪಸ್ಥಿತರಿದ್ದರು.

ಸೇವಾ ಸಂಸ್ಥೆಗೆ ಕೊಡುಗೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ .ಲಿ. ಸಂಸ್ಥೆಗೆ  ಸೇವಾಭಾರತಿ ಪರವಾಗಿ  ಕೋಶಾಧಿಕಾರಿ ಕೆ.ವಿನಾಯಕ ರಾವ್ ಕೃತಜ್ಞತೆ ಸಲ್ಲಿಸಿದ್ದಾರೆ.

Related posts

ಶಿಬಾಜೆಯಲ್ಲಿ ದಲಿತ ಯುವಕನ ಹತ್ಯೆ ಆರೋಪ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಯಿಂದ ಒತ್ತಾಯ

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಆರಂಭ

Suddi Udaya

ಭಾರೀ ಮಳೆ: ಲಾಯಿಲ ಹಮ್ಮಬ್ಬ ರವರ ಹೊಟೇಲ್ ನ ಮೇಲ್ಛಾವಣಿ ಕುಸಿತ

Suddi Udaya

ಜಿಲ್ಲಾಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಇಂದಬೆಟ್ಟು ಗ್ರಾ.ಪಂ. ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಉಜಿರೆ: ಮಾಚಾರು ದರ್ಖಾಸು ನಿವಾಸಿ ಸುಂದರಿ ನಿಧನ

Suddi Udaya
error: Content is protected !!