22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.13-17 ಚಾರ್ಮಾಡಿ ಶ್ರೀಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವ

ಚಾರ್ಮಾಡಿ : ಇಲ್ಲಿಯ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ಫೆ.13ರಿಂದ ಮೊದಲ್ಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.17ರ ವರೆಗೆ ವೈಭವದಿಂದ ನಡೆಯಲಿದೆಯೆಂದು ಕ್ಷೇತ್ರದ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ ತಿಳಿಸಿದ್ದಾರೆ.

ಫೆ.13ರಂದು ಪೂರ್ವಾಹ್ನ ವೈದಿಕ ವಿಧಿ ವಿಧಾನಗಳು, ಸಂಜೆ 7-00ರಿಂದ ಊರ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ, ರಾತ್ರಿ 8-00ಕ್ಕೆ ಭರತ ನಾಟ್ಯ, ಓಂ ಸಾಯಿ ನೃತ್ಯ ತಂಡ ಮತ್ತು ಪ್ರಿಯಾ ಸತೀಶ್‌ ಮತ್ತು ತಂಡದವರಿಂದ, ರಾತ್ರಿ 8-00ಕ್ಕೆ ಮಹಾಪೂಜೆ, ದರ್ಶನಬಲಿ, ರಾತ್ರಿ 9-00ಕ್ಕೆ ಪಂಚಶ್ರೀ ಸಾಂಸ್ಕೃತಿಕ ಸೇವಾ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ರಾಮಣ್ಣ ಭಂಡಾರಿ ನಿರ್ದೇಶನದ ಮಕ್ಕಳಳಿಂದ ‘ಏಕಾದಶಿ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ. ರಾತ್ರಿ 9-00 ರಿಂದ : ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಫೆ.14ರಂದು ಬೆಳಿಗ್ಗೆ ಗಣಹೋಮ, ಉಷಃ ಪೂಜೆ, ಬಿಂಬಶುದ್ಧಿ, ಸಾನಿಧ್ಯ ಕಲಶಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ತಂತ್ರಬಲಿ, ಉತ್ಸವಬಲಿ, ಸಂಜೆ 7-00ರಿಂದ ನೃತ್ಯ ವೈವಿಧ್ಯ ಶಾಲಾ ಮಕ್ಕಳು ಮತ್ತು ಊರವರಿಂದ ನೃತ್ಯ ಕಾರ್ಯಕ್ರಮ ಟಾಪ್ ಎಂಟರ್‌ಟ್ರೈನರ್ಸ್ ಡಾನ್ಸ್ ಅಕಾಡೆಮಿ, ಉಜಿರೆ ಇವರಿಂದ, ರಾತ್ರಿ 8-00ಕ್ಕೆ ದೊಡ್ಡ ರಂಗಪೂಜೆ, ಮಾಹಾಪೂಜೆ, ಉತ್ಸವ ಬಲಿ, ನೃತ್ಯಬಲಿ, 9-00ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 9-30ಕ್ಕೆ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ ನಡೆಯಲಿದೆ.

ಫೆ.15 ರಂದು ಬೆಳಿಗ್ಗೆ ವೈದಿಕ ವಿಧಿ ವಿಧಾನಗಳು, ಸಂಜೆ 7-30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭೆಯ ಅಧ್ಯಕ್ಷತೆಯನ್ನು ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಹೊಸಮಠ ವಹಿಸಲಿದ್ದು, ಧಾರ್ಮಿಕ ಉಪನ್ಯಾಸವನ್ನು ಕಲೆಂಜ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ| ಎಂ.ಎಂ. ದಯಾಕರ್ ನೀಡಲಿದ್ದಾರೆ.


ಮುಖ್ಯ ಅತಿಥಿಗಳಾಗಿ ವಿನಯಚಂದ್ರ ಕೆ., ‘ಬೆಳಕು’ ಉಜಿರೆ, ಕಕ್ಕಿಂಜೆ ಕೆನರ ಬ್ಯಾಂಕ್ ಶಾಖಾ ಪ್ರಬಂಧಕರು ಶ್ರೀಕಾಂತ್ ಉಪಸ್ಥಿತರಿರಲಿದ್ದಾರೆ.
ಸನ್ಮಾನಿತರಾಗಿ ನಾರಾಯಣ ಪೂಜಾರಿ ಪೊಂಗಾರ್‌ದಡಿ ಉಪಸ್ಥಿತರಿರಲಿದ್ದಾರೆ. ರಾತ್ರಿ 8-00ಕ್ಕೆ ದೊಡ್ಡ ರಂಗಪೂಜೆ, 11-00ರಿಂದ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಪುದರ್ ಎಂಚ ದೀವೋಡು…? ನಾಟಕ ಪ್ರದರ್ಶನ ನಡೆಯಲಿದೆ.

ಫೆ.16ರಂದು ಸಂಜೆ 6-30ಕ್ಕೆ ಮತ್ತೂರು ಬೆಡಿ ಸೇವೆ, ಸಂಜೆ 7-00ರಿಂದ ಭಕ್ತಿಗಾನ ಯಕ್ಷ ಭಜನೆ
ಕೀರ್ತನಾ ಕಲಾ ತಂಡ ಮುಂಡಾಜೆ (ರಿ.) ಇವರಿಂದ, 9-00ಕ್ಕೆ ರಂಗಪೂಜೆ, 9-30ಕ್ಕೆ ರಥಬೀದಿಯ ದೇವರ ಕಟ್ಟೆಗೆ ದೇವರ ಸವಾರಿ, ಕಟ್ಟೆ ಪೂಜೆ, ಸಿಡಿಮದ್ದು ಪ್ರದರ್ಶನ, ಸೇವಾ ಸುತ್ತುಗಳು, ನೃತ್ಯಬಲಿ, ಬಟ್ಟಲು ಕಾಣಿಕೆ, ದೇವರ ಶಯನ, ಕವಾಟಬಂಧನ ನೆರವೇರಲಿದೆ.

ಫೆ.17ರಂದು ಬೆಳಿಗ್ಗೆ 6-00ಕ್ಕೆ ಕವಾಟೋದ್ಘಾಟನೆ, ಪೂ.10-00ಕ್ಕೆ ಬಟ್ಟಲು ಕಾಣಿಕೆ, ಮಹಾಪೂಜೆ, ಪೂ.11-00ಕ್ಕೆ ಕೊಡಿ ಇಳಿಸುವುದು, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಸಂಜೆ 5-30ಕ್ಕೆ ದೈವಗಳ ಭಂಡಾರ ಹೊರಡುವುದು, ಸಂಜೆ 6-00 ರಿಂದ 12-00ರ ತನಕ ಪಿಲಿಚಾಮುಂಡಿ ಮತ್ತು ಅಂಗಣ ಪಂಜುರ್ಲಿ ದೈವಗಳಿಗೆ ನೇಮೋತ್ಸವ ಜರಗಲಿದೆ.

Related posts

ಮುಗ್ಗಗುತ್ತು ದಿ | ಕೆ. ಜಿ ಬಂಗೇರರ ಪತ್ನಿ ಶ್ರೀಮತಿ ವೀರಮ್ಮ ನಿಧನ

Suddi Udaya

ಬಿಜೆಪಿಯ ಕೇಂದ್ರ ಸರಕಾರ ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರವನ್ನು ರೂ. 200 ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 400 ಇಳಿಸುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತರ್ಹ: ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌

Suddi Udaya

ಗಡಾಯಿಕಲ್ಲು ಚಾರಣಕ್ಕೆ ಮುಂದಿನ ಆದೇಶದವರೆಗೆ ನಿಷೇಧ

Suddi Udaya

ಉಜಿರೆ: ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಮೌಲ್ಯಧಾರಿತ ಶಿಕ್ಷಣ ತರಗತಿಗಳ ಉದ್ಘಾಟನೆ

Suddi Udaya

ಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರಿಂದ ಶ್ರಮದಾನ

Suddi Udaya

ಗುರುವಾಯನಕೆರೆಯ ಸುಬೇದಾರ್ ಏಕನಾಥ ಶೆಟ್ಟಿಯವರಿಗೆ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ ಪ್ರದಾನ

Suddi Udaya
error: Content is protected !!