September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.12-16: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ತೆಂಕಕಾರಂದೂರು : ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ವೇದಮೂರ್ತಿ ನಡ್ವಂತಾಡಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.12ರಿಂದ 16ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆಯೆಂದು ಕ್ಷೇತ್ರದ ಅನುವಂಶಿಕ ಆಡಳಿತದಾರ ಕೃಷ್ಣ ಸಂಪಿಗೆತ್ತಾಯ ಮತ್ತು ಜಾತ್ರ ಸಮಿತಿ ಅಧ್ಯಕ್ಷ ಜಗದೀಶ್ ಗೌಡ ಕಜೆಬೆಟ್ಟು ತಿಳಿಸಿದ್ದಾರೆ.

ಫೆ.12ರಂದು ಬೆಳಿಗ್ಗೆ 7-00ರಿಂದ ವೈದಿಕ ವಿಧಿ ವಿಧಾನಗಳು ಪ್ರಾರಂಭ, 9-00ಕ್ಕೆ ಉಗ್ರಾಣ ಮುಹೂರ್ತ, ತೋರಣ ಮುಹೂರ್ತ ಗಣಪತಿ ಹವನ, ನವಕ ಕಲಶ,10-00ರಿಂದ ಮಹಾ ಪೂಜೆ, ನಿತ್ಯ ಬಲಿ, ಧ್ವಜಾರೋಹಣ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6-00ರಿಂದ ಶ್ರೀರಂಗ ಪೂಜೆ, ವಸಂತಕಟ್ಟೆ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ.13ರಂದು ಬೆಳಿಗ್ಗೆ 8-00ರಿಂದ ಪುಣ್ಯಾಹ, ನಿತ್ಯ ನೈಮಿತ್ತಿಕಗಳು, 11-30ರಿಂದ ಶ್ರೀ ವಿಷ್ಣುಮೂರ್ತಿ ದೇವರ ಮಹಾಪೂಜೆ ಬಲಿ, ಪ್ರಸಾದ ವಿತರಣೆ,12-00ರಿಂದ ಅನ್ನ ಸಂತರ್ಪಣೆ, ಸಂಜೆ 6-00ರಿಂದ ಶ್ರೀರಂಗ ಪೂಜೆ, ಬಲಿ, ವಸಂತ ಕಟ್ಟೆ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6-00ರಿಂದ ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ, ಮೂಜಿಲ್ನಾಯ, ಕಲ್ಕುಡ-ಕಲ್ಲುರ್ಟಿಗಳಿಗೆ ಗಗ್ಗರ ಸೇವೆ, ರಾತ್ರಿ 7-00ರಿಂದ ಮಲ್ಲಿಪಾಡಿ ಶ್ರೀ ಸದಾಶಿವ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ ನಡೆಯಲಿದೆ.

ಫೆ.14ರಂದು ಬೆಳಿಗ್ಗೆ 8-00ರಿಂದ ಪುಣ್ಯಾಹ, ನಿತ್ಯ ನೈಮಿತ್ತಿಕಗಳು, 10-00ರಿಂದ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಆಶ್ಲೇಷಾ ಬಲಿ, ಮಧ್ಯಾಹ್ನ 12-00ರಿಂದ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ 6-00ರಿಂದ ಶ್ರೀರಂಗ ಪೂಜೆ, ಬಲಿ, ವಸಂತಕಟ್ಟೆ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ,
ಸಂಜೆ 7-00ರಿಂದ ಬೆಂಗಳೂರು ಪ್ರಣೀತ ಮತ್ತು ಸಂಸ್ಕೃತಿ ಇವರಿಂದ ಪಿಟೀಲು ವಾದನ, 8-00ರಿಂದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ 9-00ರಿಂದ ಶ್ರೀ ಆಧಿ ಧೂಮಾವತಿ ಶ್ರೀ ದೇಯಿ ಬೈದಿತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ – ಗೆಜ್ಜೆಗಿರಿ ಇವರಿಂದ ‘ಶ್ರೀ ದೇವೀ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪೆ.15,16,17 ರಂದು ವಿವಿಧ ವೈದಿಕ ವಿಧಿ ವಿಧಾನಗಳು, ರಂಗಪೂಜೆ, ಭಜನೆ ಕಾರ್ಯಕ್ರಮಗಳು ನಡೆಯಲಿದೆ.

Related posts

ಕಾರಿಂಜ ಶ್ರೀ ವನಶಾಸ್ತಾರ ಮತ್ತು ವೀರಭದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಗ್ರಾಣ , ಕಾರ್ಯಾಲಯ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಊರಿಗೆ ವನ್ಯಜೀವಿ ಬಂದರೆ 1926ಗೆ ಕರೆ ಮಾಡಿ: ಸಚಿವ ಈಶ್ವರ ಬಿ ಖಂಡ್ರೆ

Suddi Udaya

ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ಟ್ಯೂಷನ್ ತರಬೇತಿ ಸಮಾರೋಪ

Suddi Udaya

ಸೋಣಂದೂರು ಶಾಲೆಗೆ ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ವತಿಯಿಂದ ಧ್ವನಿವರ್ಧಕ ಕೊಡುಗೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಜನಜಾತಿಯ ಗರಿಮಾ ಉತ್ಸವ

Suddi Udaya

ಡಿ.18: ಬೆಳ್ತಂಗಡಿ ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಭೇಟಿ : ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ- ಸೇವಾ ಯೋಜನೆಗಳ ಹಸ್ತಾಂತರ

Suddi Udaya
error: Content is protected !!