24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.10: ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವ: ಹುಣ್ಸೆಕಟ್ಟೆಯಲ್ಲಿ ಪೂರ್ವಭಾವಿ ಸಭೆ

ಬೆಳ್ತಂಗಡಿ: ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆಯಲ್ಲಿ ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪುರವರ ನೇತೃತ್ವದಲ್ಲಿ ಫೆ. 5ರಂದು ನಡೆಯಿತು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ। ರಾಜಶೇಖರ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಗಣೇಶ್ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷರಾದ ಪೀತಾಂಬರ ಹೇರಾಜೆ, ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕರಾದ ಯೋಗೀಶ್ ಕುಮಾರ್, ಗ್ರಾಮ ಸಮಿತಿಯ ಅಧ್ಯಕ್ಷರಾದ ಸೀತಾರಾಮ್ ಪೂಜಾರಿ, ಪ್ರಸಾದ್ ಪೂಜಾರಿ ,ಸುರೇಶ್ ಪೂಜಾರಿ, ಸಂಘದ ನಿರ್ದೇಶಕ ಕರುಣಾಕರ ಬಂಗೇರ, ಮಹಿಳಾ ಘಟಕದ ಅಧ್ಯಕ್ಷರಾದ ಸುಮತಿ ಪ್ರಮೋದ್, ಮಹಿಳಾ ಘಟಕದ ಸಂಚಾಲಕರಾದ ಶಾಂತ ಬಂಗೇರ, ರಾಜಶ್ರೀ ರಾಮನ್ ಹಾಗೂ ಹುಣ್ಸೆಕಟ್ಟೆ ಗ್ರಾಮದ ಸಮಾಜ ಬಾಂಧವರು ಉಪಸ್ಥಿತರಿದ್ದರು.


ರಜತ ಮಹೋತ್ಸವದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕಾಗಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರು ವಿನಂತಿಸಿದರು.

Related posts

ಗುರುವಾಯನಕೆರೆ ಶ್ರೀ ವರದ ಪಾಂಡುರಂಗ ವಿಠ್ಠಲ ಮಂದಿರಕ್ಕೆ ಲೋಕೋಪಯೋಗಿ ಸಚಿವರ ಭೇಟಿ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವೈಭವ; ಬೆಳ್ಳಿಯ ಕಲಶ ಸಮರ್ಪಣೆ

Suddi Udaya

ಕಳೆಂಜ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ- ಶವ ಮೇಲೆತ್ತಿದ ಶೌರ್ಯ ವಿಪತ್ತು ನಿರ್ವಹಣಾ ತಂಡ

Suddi Udaya

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

Suddi Udaya

ನೆರಿಯದಲ್ಲಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ: ಗ್ರಾಮ ಪಂಚಾಯಿತಿ ಎದುರು ರಾತ್ರಿ ತನಕ ಪ್ರತಿಭಟನೆ

Suddi Udaya

ಬೆಳ್ತಂಗಡಿ : ಟೀಮ್ ಸತ್ಯಜಿತ್‌ ಸುರತ್ಕಲ್ ತಂಡದಿಂದ ಬೃಹತ್ ಜನಾಗ್ರಹ ಸಭೆಯ ಪೂರ್ವಭಾವಿ ಸಭೆ

Suddi Udaya
error: Content is protected !!