24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ ಮುಸ್ತಾಫರ ಮನೆಗೆ ನುಗ್ಗಿದ ಕಳ್ಳರು: ರೂ.1.71 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಕಳವು

ಬೆಳ್ತಂಗಡಿ: ಕಡಿರುದ್ಯಾವರ ಮುಸ್ತಾಫರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆ ಹಂಚು ತೆರೆದು ರೂಮಿನ ಗಾಡ್ರೇಜ್‌ ನಲ್ಲಿರಿಸಿದ್ದ ರೂ 1,71,000 ಮೌಲ್ಯದ ಚಿನ್ನಾಭರಣ ಹಾಗೂ ನಗದು ರೂ 1,20,000/- ಹಣವನ್ನು ಕಳವು ಮಾಡಿಕೊಂಡ ಘಟನೆ ಫೆ.6ರಂದು ನಡೆದಿದೆ.

ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಮುಸ್ತಾಪ್‌ (30) ಎಂಬವರ ದೂರಿನಂತೆ, ಫೆ;05 ರಂದು ತನ್ನ ಬಾಬ್ತು ಗೂಡ್ಸ್‌ ವಾಹನದ ಸರ್ವಿಸ್‌ ಗಾಗಿ ಚಿಕ್ಕಮಗಳೂರಿಗೆ ತೆರಳಿದ್ದವರು, ಆ ದಿನ‌ ಅಲ್ಲಿಯೇ ತಂಗಿರುತ್ತಾರೆ. ಬೆಳ್ತಂಗಡಿಯ ಮನೆಯಲ್ಲಿದ್ದ ಅವರ ತಾಯಿ ಕೂಡಾ ಆ ದಿನ ರಾತ್ರಿ, ಮನೆಗೆ ಬೀಗ ಹಾಕಿ ಹತ್ತಿರದಲ್ಲಿರುವ ಚಿಕ್ಕಪ್ಪನ ಮನೆಗೆ ತೆರಳಿರುತ್ತಾರೆ. ಮರುದಿನ ಫೆ.06 ರಂದು ಬೆಳಿಗ್ಗೆ ತಾಯಿ ಮನೆಗೆ ಬಂದು ನೋಡಿದಾಗ ಮನೆಯ ಹಂಚು ತೆರೆದು ಯಾರೋ ಕಳ್ಳರು ಒಳಪ್ರವೇಶಿಸಿ ರೂಮಿನ ಗಾಡ್ರೇಜ್‌ ನಲ್ಲಿರಿಸಿದ್ದ ರೂ 1,71,000 ಮೌಲ್ಯದ ಚಿನ್ನಾಭರಣ ಹಾಗೂ ನಗದು ರೂ 1,20,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 15/2024 ಕಲ;457,380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು

Suddi Udaya

ಆ.15: ನಾಲ್ಕೂರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು

Suddi Udaya

ಕುಕ್ಕೇಡಿ:ಕೋಟಿ ಚೆನ್ನಯ ಸೇವಾ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಯಾರದ್ದೋ ಓಲೈಕೆಗಾಗಿ ಸರ್ಕಾರದ ತೀರ್ಮಾನಗಳು: ಮತಾಂತರ ನಿಷೇಧ ಕಾಯಿದೆ ವಾಪಸ್ಸಿಗೆ ಬಿ.ಜೆ.ಪಿ ವಿರೋಧ

Suddi Udaya

ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ

Suddi Udaya
error: Content is protected !!