25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರಾಯ : ಆಟೋರಿಕ್ಷಾಕ್ಕೆ ಟಿಪ್ಪರ್‌ ಲಾರಿ ಡಿಕ್ಕಿ: ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಕರಾಯ ಗ್ರಾಮದ ಕಲ್ಲೇರಿ ಕ್ವಾಟ್ರಸ್‌ ಬಳಿ ಅರುಣ್‌ ಎಂಬುವವರು ಟಿಪ್ಪರ್‌ ಲಾರಿಯನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಆಟೋರಿಕ್ಷಾದಲ್ಲಿದ್ದವರಿಗೆ ಗಾಯಗಳಾದ ಘಟನೆ ಫೆ.6 ರಂದು ನಡೆದಿದೆ.

ಪುತ್ತಿಲ ಗ್ರಾಮದ ಸುಜೀರ್‌ ಮಹಮ್ಮದ್‌ ಪೈಝಲ್‌ (38) ಎಂಬವರ ದೂರಿನಂತೆ, ಫೆ 06 ರಂದು ಮಧ್ಯಾಹ್ನ ಆರೋಪಿ ಟಿಪ್ಪರ್‌ ಲಾರಿ ಚಾಲಕ ಅರುಣ್‌ ಎಂಬವರು, KA-21-C-3149 ನೇ ನೋಂದಣಿ ನಂಬ್ರದ ಟಿಪ್ಪರ್‌ ಲಾರಿಯನ್ನು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಕ್ವಾಟ್ರಸ್‌ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಅಬ್ಬಾಸ್ ಎಂಬವರು ಚಾಲಕರಾಗಿ ಅಶ್ರಫ್‌ ಕಲ್ಲೇರಿ, ಅನ್ನತ್‌ ಬೀಬಿ ಹಾಗೂ ಮಹಮ್ಮದ್‌ ನೌಮಾನ್‌ (3.5ವರ್ಷ) ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಬರುತ್ತಿದ್ದ KA-21-B-9922 ನೇ ನೋಂದಣಿ ನಂಬ್ರದ ಆಟೋರಿಕ್ಷಾಕ್ಕೆ ಅಪಘಾತವಾಗಿರುತ್ತದೆ. ಪರಿಣಾಮ ಆಟೋರಿಕ್ಷಾದಲ್ಲಿದ್ದ ಅಶ್ರಫ್‌ ಕಲ್ಲೇರಿ ರವರಿಗೆ, ಅನ್ನತ್‌ ಬೀಬಿ ಮತ್ತು ನೌಮಾನ್‌ ರವರಿಗೆ ರಕ್ತಗಾಯಗಳಾಗಿದ್ದು, ಆಟೋರಿಕ್ಷಾದ ಚಾಲಕ ಅಬ್ಬಾಸ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ, ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಸಂಖ್ಯೆ: 17/2024 ಕಲಂ: 279, 337 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮುಗೇರಡ್ಕ ಅಂಗನವಾಡಿಯಲ್ಲಿ ಎಲ್ ಕೆಜಿ , ಯುಕೆಜಿ ಪ್ರಾರಂಭ

Suddi Udaya

ಉಜಿರೆ: ಆಟೋ ಚಾಲಕ ಮಂಜುನಾಥ ನಿಧನ

Suddi Udaya

ಮುಗ್ಗ ಗುತ್ತು ಮನೆಯಲ್ಲಿ ವೈಭವದ ನವರಾತ್ರಿ ಪೂಜೆ

Suddi Udaya

ಮೂಡುಕೋಡಿ ಅರ್ಚಕ ಪುಟ್ಟಪ್ಪಯ್ಯ ನಿಧನ

Suddi Udaya

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿ ನಾವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ನಾವೂರು ನೇಮಕ

Suddi Udaya

ಸಕಾಲಿಕ ಚಿಕಿತ್ಸೆ: ಮಹಿಳೆಯ ಜೀವ ರಕ್ಷಿಸಿದ ಕಕ್ಕಿಂಜೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕ

Suddi Udaya
error: Content is protected !!