ಬೆಳ್ತಂಗಡಿ: ಇಲ್ಲಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.13 ರಿಂದ ಫೆ.22 ರವರೆಗೆ ಕ್ಷೇತ್ರದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಫೆ.13 ರಂದು ಬೆಳಗ್ಗೆ 7.30 ರಿಂದ ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಸಮುಚ್ಚಯದ ಭ| ಶ್ರೀ ಶಾಂತಿನಾಥ ಸ್ವಾಮಿ, ಭ| ಶ್ರೀ ಅನಂತನಾಥ ಸ್ವಾಮಿ, ಭ| ಶ್ರೀ ಚಂದ್ರನಾಥ ಸ್ವಾಮಿ, ಭ| ಶ್ರೀಪಾರ್ಶ್ವನಾಥ ಸ್ವಾಮಿ ದೇವರಿಗೆ “ಕ್ಷೀರಾಭೀಷೇಕ”, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಹಾಗೂ ಬ್ರಹ್ಮದೇವರಿಗೆ “ಮಹಾಪೂಜೆ” ನಡೆಯಲಿದೆ. ಕುತ್ಯಾರು ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಾನದಲ್ಲಿ ಬೆಳಗ್ಗೆ 9.30 ಕ್ಕೆ ಪ್ರಶ್ನಾಚಿಂತನ, ಗೊನೆ ಮುಹೂರ್ತ, ತೋರಣ ಮುಹೂರ್ತ, ನವಕಕಲಶ, ಧ್ವಜಾರೋಹಣ ಬಳಿಕ ಪ್ರಸನ್ನ ಪೂಜೆ. ಫೆ.14 ಮಧ್ಯಾಹ್ನ ಪ್ರಸನ್ನ ಪೂಜೆ, ಸಂಜೆ ಗಂಟೆ 4.00 ಕ್ಕೆ ಕೆಲ್ಲಗುತ್ತು ಮನೆಯಿಂದ ಧರ್ಮದೈವಗಳ ಭಂಡಾರದ ಆಗಮನ, ರಾತ್ರಿ ಬಂಡಿಕ್ಕು ಸನ್ನಿಧಾನದಲ್ಲಿ ದೈವಗಳಿಗೆ “ನೇಮೋತ್ಸವ” ಫೆ.15 ಬೆಳಗ್ಗೆ 9.30 ರಿಂದ ಶತರುದ್ರಾಭಿಷೇಕ, ಮಧ್ಯಾಹ್ನ ಪ್ರಸನ್ನ ಪೂಜೆ, ಸಂಜೆ ಗಂಟೆ 6.00ರಿಂದ ವೇದಮೂರ್ತಿ ಶ್ರೀಕಾಂತ್ ಸಾಮಗರು ಉಡುಪಿ ಇವರ ನೇತೃತ್ವದಲ್ಲಿ ನಾಗ ತನುತರ್ಪಣ ಬಳಿಕ ಮಹಾಪೂಜೆ
ಫೆ.16 ಬೆಳಗ್ಗೆ9.30ರಿಂದ ಕೊಯ್ಯೂರು ಬ್ರಹ್ಮಶ್ರೀ ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮ ಬಳಿಕ ಪ್ರಸನ್ನ ಪೂಜೆ, ಸಾಯಂಕಾಲ ರಂಗಪೂಜೆ ಸಂಜೆ ಉಗ್ರಾಣ ಮುಹೂರ್ತ, ಬಯ್ಯದಬಲಿ ಉತ್ಸವ
ಫೆ.17 ಬೆಳಗ್ಗೆ 9.30ರಿಂದ ಸಾಮೂಹಿಕ ಕಲ್ಪೋಕ್ತ ಶನಿಪೂಜೆ ಬಳಿಕ ಪ್ರಸನ್ನ ಪೂಜೆ. ಸಂಜೆ ದೇವರ ಉತ್ಸವ, ವಸಂತಕಟ್ಟೆ ಪೂಜೆ ಬಳಿಕ ಪ್ರಸನ್ನ ಪೂಜೆ. ಫೆ.18 ಮಧ್ಯಾಹ್ನ ಪ್ರಸನ್ನ ಪೂಜೆ, ರಾತ್ರಿ ದೇವರ ಉತ್ಸವ, ಕೆರೆಕಟ್ಟೆ ಪೂಜೆ ಬಳಿಕ ಪ್ರಸನ್ನ ಪೂಜೆ.
ಫೆ.19 ಅಷ್ಟಬಂಧ ಬ್ರಹ್ಮಕಲಶೋತ್ಸವದ ವರ್ಧಂತಿ ಬಗ್ಗೆ ಬೆಳಗ್ಗೆ ಗಣಹೋಮ, ಶತರುದ್ರಾಭಿಷೇಕ ಬಳಿಕ ಪ್ರಸನ್ನ ಪೂಜೆ. ರಾತ್ರಿ ದೇವರ ಉತ್ಸವ, ಪಲ್ಲಕಿ ಉತ್ಸವ, ಚಂದ್ರಮಂಡಲೋತ್ಸವ, ಅಶ್ವತ್ಥಕಟ್ಟೆ ಪೂಜೆ, ರಂಗಪೂಜೆ ಬಳಿಕ ಪ್ರಸನ್ನ ಪೂಜೆ.
ಫೆ.20 ಬೆಳಗ್ಗೆ 9.30 ಕ್ಕೆ ಉತ್ಸವ, ದರ್ಶನ ಬಲಿ. ಸಂಜೆ ಗಂಟೆ 6 ರಿಂದ 8.30 ರ ತನಕ ಭಗವಾನ್ ಶಿರಿಡಿ ಸಾಯಿ ಸತ್ಯಸಾಯಿ ಸೇವಾಕ್ಷೇತ್ರ, ಹಳೆಕೋಟೆ ಇವರಿಂದ “ಭಜನೆ” ಬಳಿಕ ದೇವರ ಉತ್ಸವ, ಶ್ರೀ ಮನ್ಮಹಾರಥೋತ್ಸವ, ಭೂತಬಲಿ, ಕವಾಟ ಬಂಧನ. ಫೆ.21 ಬೆಳಿಗ್ಗೆ ಕವಾಟೋಧ್ಘಾಟನೆ ಬಳಿಕ ಪ್ರಸನ್ನ ಪೂಜೆ, ಸಂಜೆ: ದೇವರ ಬೀದಿ ಸವಾರಿ, ಕಟ್ಟೆ ಪೂಜೆಗಳು ಅವಭೃತ ಸ್ನಾನ, ಧ್ವಜಾವರೋಹಣ, ದೈವಗಳಿಗೆ ಅಂಗಣ ನೇಮ, ದೇವಸ್ಥಾನದಿಂದ ಧರ್ಮದೈವಗಳ ಭಂಡಾರವು ಕೆಲ್ಲಗುತ್ತು ಮನೆಗೆ ನಿರ್ಗಮನ.
ಫೆ.22 ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಮಹಾಪೂಜೆ. ರಾತ್ರಿ ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಹಾಗೂ ಪ್ರತಿದಿನ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಸೇವೆಯು ನಡೆಯಲಿದೆ.