ಕುಕ್ಕೇಡಿ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಜರಗಿತು.

ಎನ್ಆರ್ ಎಲ್ ಎಮ್ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ಕುಕ್ಕೇಡಿ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ನಿಟ್ಟಡೆ, ಮಂಗಳತೇರು, ಫಂಡಿಜೆ, ಕುಂಭಶ್ರೀ ಮತ್ತು ಎಸ್‌ .ಡಿ.ಡಂ.ಐ.ಟಿ.ಐ ಶಾಲಾ ಮಕ್ಕಳಿಂದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಡಾ. ಬಿ. ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಹಾಗೂ ಪ್ರತಿಮೆಗೆ ಹಾರಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂವಿಧಾನ ಪೀಠಿಕೆಯನ್ನು ಬೋಧನೆ ಮಾಡಲಾಯಿತು. ಸಂವಿಧಾನ ಜಾಗೃತಿ ಕುರಿತು ಶಾಲಾ ಮಕ್ಕಳು ಜಾಥಾ ಕಾರ್ಯಕ್ರಮದಲ್ಲಿ ಘೋಷವಾಕ್ಯಗಳನ್ನು ಕೂಗಿದರು. ಸಂವಿಧಾನ ಜಾಗೃತಿ ರಥವು ನಿಟ್ಟಡೆ ಗ್ರಾಮದ ನಾರಾಯಣ ಗುರು ಸರ್ಕಲ್‌ ಬಳಿಯಿಂದ ಹೊರಟು ಗ್ರಾಮ ಪಂಚಾಯತ್ ವಠಾರಕ್ಕೆ ಮೆರವಣಿಗೆಯ ಮೂಲಕ ಸಂಚರಿಸಿತು.

ಸಂವಿಧಾನ ಜಾಗೃತಿ ಜಾಥಾ ಜೊತೆ ಬಂದ ಮಂಗಳೂರು ಕಲಾ ತಂಡದವರಿಂದ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಹಾಜರಿದ್ದ ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರುಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೇಮಚಂದ್ರ ಮತ್ತು ಇತರ ಅಧಿಕಾರಿ ವರ್ಗದವರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಾಜಿ ಅಧ್ಯಕ್ಷರುಗಳು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ನಿಟ್ಟಡೆ ಬುಳೆಕ್ಕಾರ, ಫಂಡಿಜೆ, ಮಂಗಳತೇರು, ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ ಹಾಗೂ ಎಸ್.ಡಿ.ಎಂ. ಶಾಲಾ ಶಿಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ, ನರೇಗಾ ಐಇಸಿ ಕೋ-ಆರ್ಡಿನೇಟರ್‌ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Comment

error: Content is protected !!