ದ ಕ ಜಿಲ್ಲಾ ಪಂಚಾಯತ್ , ತಾ ಪಂ ಬೆಳ್ತಂಗಡಿ, ಸಮಾಜಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಬಳಂಜ
ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಫೆ. 08 ರಂದು ಬಳಂಜ ಗ್ರಾಮ ಪಂಚಾಯತ್ ವಠಾರದಲ್ಲಿ ಜರುಗಿತು.
ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಮಾಧವ್ ಜಾಥ ಕೆಕೆ ಚಾಲನೆ ನೀಡಿದರು..
ಪಂಚಾಯತ್ ಉಪಾಧ್ಯಕ್ಷರಾದ ಶಶಿಧರ್ ಶೆಟ್ಟಿ, ಸದಸ್ಯರಾದ ರವೀಂದ್ರ ಅಮೀನ್, ಬೇಬಿ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಹೇಮಚಂದ್ರ, ಮ್ಯಾನೇಜರ್ ಧನಂಜಯ್, ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಂಜೀವಿ ಒಕ್ಕೂಟದ ಪದಾಧಿಕಾರಿಗಳು,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಬಳಂಜ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ತಾಲೂಕು ಐಇಸಿ ಸಂಯೋಜಕಿ ವಿನಿಷ, ಪುನರ್ವಸತಿ ಕಾರ್ಯಕರ್ತೆ, ಗ್ರಂಥಪಾಲಕಿ, ಪಂಚಾಯತ್ ಸಿಬ್ಬಂದಿಗಳು, ಬುದ್ಧ ಬಸವ ಟ್ರಸ್ಟ್ ನ ಚೆನ್ನ ಕೇಶವ ಮುಂತಾದವರು ಭಾಗವಹಿಸಿದ್ದರು. ಸಂವಿಧಾನದ ಪ್ರಸ್ತಾವನೆಯನ್ನು ಸಹಾಯಕ ನಿರ್ದೇಶಕರು ಬೋಧಿಸಿದರು.
ಸಂವಿಧಾನ ಕುರಿತಾದ ಸ್ಪರ್ಧೆಗಳ ವಿಜೇತರಿಗೆ ಅಭಿನಂದಿಸಲಾಯಿತು.
ಸುರತ್ಕಲ್ ಕಲಾ ತಂಡದವರಿಂದ ಸಂವಿಧಾನ ಜಾಗೃತಿ ಗೀತೆ ಮತ್ತು ನಾಟಕಗಳನ್ನು ಪ್ರದರ್ಶಿಸಲಾಯಿತು.
ನಂತರ ಬಳಂಜ ದವರೆಗೆ ಸಂವಿಧಾನ ಜಾಗೃತಿ ಮೆರವಣಿಗೆ ನಡೆಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ವಾಗತಿಸಿ ಅಭಿನಂದಿಸಿದರು.