July 23, 2026
ಧಾರ್ಮಿಕ

ಸರ್ವಧರ್ಮಗಳಲ್ಲಿ ತ್ಯಾಗದ ಪರಿಕಲ್ಪನೆ ‌ಆನ್ಲೈನ್ ನಲ್ಲಿ ವಿಚಾರಸಂಕಿರಣ

ವೇಣೂರು ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ನಿರಂಜನ ಲಹರಿಯ ಮೂಲಕ ಫೆ 06 ರ ಮಂಗಳವಾರ ಆನ್ಲೈನ್ ಮಾಧ್ಯಮದ ಮೂಲಕ ಸರ್ವಧರ್ಮಗಳಲ್ಲಿ ತ್ಯಾಗದ ಪರಿಕಲ್ಪನೆ ಎಂಬ ವಿಚಾರವಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪರಮ ಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಮಾತನಾಡುತ್ತ ಸರ್ವ ಧರ್ಮಗಳು ತ್ಯಾಗವನ್ನು ಪ್ರತಿಪಾದಿಸಿವೆ. ಸರ್ವ ಧರ್ಮಗಳೊಡನೆ ಉತ್ತಮ ನಾಗರಿಕತೆಯೊಂದಿಗೆ, ಸಹಿಷ್ಣುತೆಯೊಂದಿಗೆ , ಸಮನ್ವಯದಿಂದ ಬದುಕಿ ಸ್ವಾರ್ಥವನ್ನು ಮಾಡದೇ ಇರುವುದೇ ತ್ಯಾಗವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪವರ್ ಟಿ ವಿ ಮುಖ್ಯಸ್ಥರಾದ ರಾಕೇಶ್ ಶೆಟ್ಟಿಯವರು ಮಾತನಾಡಿ ಭಗವಾನ್ ಬಾಹುಬಲಿ ವಿಗ್ರಹದ ಎದುರು ನಿಂತಾಗಲೇ ಬಹು ದೊಡ್ಡ ತ್ಯಾಗದ ಅರಿವಾಗುತ್ತದೆ. ಮಕ್ಕಳಿಗಾಗಿ ದೊಡ್ಡವರು ಮೊಬೈಲ್ ತ್ಯಾಗ ಮಾಡಿ ಅವರಿಗಾಗಿ ಪರಿಸ್ಪಂದಿಸುವುದು ಈ ಆಧುನಿಕ ಕಾಲದಲ್ಲಿ ಬಹು ದೊಡ್ಡ ತ್ಯಾಗವಾಗಿದೆ.

ಹಿಂದೂ ಧರ್ಮದ ಪರವಾಗಿ ಹಿಂದೂ ಧರ್ಮದ ವಿದ್ವಾಂಸರು , ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ವಿನಾಯಕ ಭಟ್ಟ್ ಮೂಡುಬಿದಿರೆ ಇವರು ಹಿಂದೂ ಧರ್ಮದಲ್ಲಿ ತ್ಯಾಗಧರ್ಮ ಎಂಬ ವಿಚಾರದಲ್ಲಿ ಮಾತನಾಡುತ್ತ ನನ್ನದಾಗಿರುವ ವಸ್ತುಗಳನ್ನು ನನ್ನದಲ್ಲ ಎನ್ನುವ ಉದಾತ್ತ ಭಾವನೆ ಹೊಂದುವುದೇ ತ್ಯಾಗ ಧರ್ಮವಾಗಿದೆ. ಈ ಭಾವನೆ ಬರಬೇಕಾದರೆ ನಮ್ಮನ್ನು ನಾವು ಶುದ್ಧೀಕರಿಸಬೇಕೆಂದರು.

ಇಸ್ಲಾಂ ಧರ್ಮದಲ್ಲಿ ತ್ಯಾಗ ಧರ್ಮ ಎಂಬ ವಿಚಾರದ ಮೇಲೆ ಪತ್ರಕರ್ತರಾದ ಅಶ್ರಫ್ ಆಲಿಕುಂಞ ಮುಂಡಾಜೆ ಇವರು ಮಾತನಾಡುತ್ತಾ ಸುಖಭೋಗಗಳಿಗೆ ಮಾರುಹೋಗದೇ ಸರಳ ಜೀವನ ನಡೆಸುವುದು ಹಾಗೂ ದೇವರ ಪ್ರೀತಿಯನ್ನು ಗಳಿಸಿಕೊಳ್ಳುವುದೇ ತ್ಯಾಗವಾಗಿದೆ ಎಂದರು.

ಕ್ರೈಸ್ತ ಧರ್ಮದಲ್ಲಿ ತ್ಯಾಗದ ಪರಿಕಲ್ಪನೆ ಎಂಬ ವಿಚಾರದ ಮೇಲೆ ಸಂತ ಅಂತೋಣಿ ಕಾಲೇಜು ನಾರಾವಿ ಇದರ ಪ್ರಾಂಶುಪಾಲ ರೆವರೆಂಡ್ ಡಾ. ಅಲ್ವಿನ್ ಸೆರಾವೋ ಮಾತನಾಡುತ್ತ ತ್ಯಾಗವು ಪ್ರೀತಿಯ ಸಂಕೇತ , ತ್ಯಾಗವಿಲ್ಲದೇ ಪ್ರೀತಿ ಅಸಾಧ್ಯ , ಹಾಗೂ ಇನ್ನೊಬ್ಬರಿಗಾಗಿ ಬದುಕುವುದೇ ತ್ಯಾಗವಾಗಿದೆ.

ಜೈನ ಧರ್ಮದಲ್ಲಿ ತ್ಯಾಗದ ಪರಿಕಲ್ಪನೆ ಎಂಬ ವಿಚಾರದ ಮೇಲೆ ಖ್ಯಾತ ಸಾಹಿತಿ ನೇಮಿಚಂದ್ರ ಮಲ್ಲಪ್ಪ ದಿಬ್ಬದ ಇವರು ಮಾತನಾಡುತ್ತಾ ತೀರ್ಥಂಕರರು , ಮುನಿಗಳು ಉತ್ಕೃಷ್ಟ ತ್ಯಾಗದ ಧಾರಕರಾಗಿದ್ದಾರೆ. ತ್ಯಾಗ ಪೂರ್ವಕ ಜೀವನವು ಪರ ಜೀವಿಗಳ ಉನ್ನತೀಕರಕ್ಕೆ ಕಾರಣವಾದರೆ ಅದು ಅತೀ ಮಹತ್ವದ ತ್ಯಾಗವಾಗಿರುತ್ತದೆ ಎಂದರು.

ಕಾರ್ಯಕ್ರಮದ ಆಯೋಜಕರಾದ ನಿರಂಜನ್ ಜೈನ್ ಕುದ್ಯಾಡಿ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳಲ್ಲಿ ಈ ಕಾರ್ಯಕ್ರಮವು ವೇಣೂರಿನ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ಆಯೋಜಿಸಲಾಗಿದೆ ಎಂದರು. ಸರ್ವಧರ್ಮಗಳಲ್ಲಿ ಸಾಮರಸ್ಯದ ಅಗತ್ಯತೆ ಇದೆ ಎಂದರು. ಖ್ಯಾತ ಸಮಾಜ ಸೇವಕ ಮಾಳ ಹರ್ಷೇಂದ್ರ ಜೈನ್ ಸಹಕಾರ ನೀಡಿ ಶುಭ ಹಾರೈಸಿದರು. ಬೆಳ್ತಂಗಡಿಯ ಖ್ಯಾತ ಕಾರ್ಯಕ್ರಮ ನಿರೂಪಕರಾದ ಶಿಕ್ಷಕ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಧೀರಜ್ ಜೈನ್ ಹೊಳೆನರಸೀಪುರ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವು ನಿರಂಜನ ಲಹರಿ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರಗೊಂಡಿತು.

‌ – ನಿರಂಜನ್ ಜೈನ್ ಕುದ್ಯಾಡಿ

Related posts

ಪೆರಾಲ್ದರಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya

ಫೆ.2: ಸೌತಡ್ಕದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮ ದೇವರು ರಾಮ ತಾರಕ ಹೋಮ ಪೂರ್ಣಹುತಿ ಕಾಲದಲ್ಲಿ ಅಗ್ನಿ ಮುಖದಲ್ಲಿ ಕಂಡು ಬಂದ ದೃಶ್ಯ

Suddi Udaya

ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್ ಭೇಟಿ

Suddi Udaya

ಧರ್ಮಸ್ಥಳ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ: ತೋರಣ ಮುಹೂರ್ತ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ರಕ್ಷಿತ್ ಶಿವರಾಮ್ ಭೇಟಿ, ಪ್ರಾರ್ಥನೆ

Suddi Udaya
error: Content is protected !!