29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಕೆರೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ತಪ್ಪಿದ ಅನಾಹುತ

ಬೆಳ್ತಂಗಡಿ:ಗುರುವಾಯನಕೆರೆಯ ಕೆರೆ ಬಳಿ ಲಾರಿಯೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಫೆ 9 ರಂದು ಮುಂಜಾನೆ ನಡೆದಿದೆ.

ಗುರುವಾಯನಕೆರೆ ಕಾರ್ಕಳ ಹೆದ್ದಾರಿಯ ಕೆರೆಯ ಬಳಿ ಇರುವ ದೊಡ್ಡ ತಿರುವಿನಲ್ಲಿ ರಸ್ತೆ ಬದಿ ಇದ್ದ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ರಸ್ತೆಗೆ ಮುರಿದು ಬಿದ್ದ ಪರಿಣಾಮ ಕೆಲವು ತಾಸು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ತಕ್ಷಣ ಸ್ಥಳೀಯರು ಮೆಸ್ಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಅವರು ಬಂದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಡಿಕ್ಕಿ ಹೊಡೆದ ಬಳಿಕ ಚಾಲಕ ಲಾರಿ‌ ಸಹಿತ ಪರಾರಿಯಾಗಿದ್ದಾನೆ. ಒಂದು ವೇಳೆ ಡಿಕ್ಕಿಯ ವೇಳೆ ಬೇರೆ ವಾಹನ ಸಂಚಾರಿಸುತಿದ್ದಲ್ಲಿ ಅಥವಾ ಸಾರ್ವಜನಿಕರು ನಡೆದುಕೊಂಡು
ಹೋಗುತಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸುತಿತ್ತು ಅದೃಷ್ಟವಶಾತ್ ವಾಹನ ಹಾಗೂ ಜನ ಸಂಚಾರ ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದಂತಿದೆ. ವಿದ್ಯುತ್ ಕಂಬ ಹಾಕಲು ಮೆಸ್ಕಾಂ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ.

Related posts

ನ್ಯಾಯತರ್ಪು: ಮಾದಕ ವಸ್ತು ದಿನಾಚರಣೆ ಅಂಗವಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಮಾಹಿತಿ ಕಾರ್ಯಕ್ರಮ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಪದಗ್ರಹಣ ಸಮಾರಂಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕೃತೆ ಕನ್ನಾಜೆಯ ಸುರಕ್ಷಾ ಆಚಾರ್ಯರಿಗೆ ಸನ್ಮಾನ

Suddi Udaya

ಬಳಂಜ: ಅಡಿಕೆ ಇಳುವರಿ ಹಾಗೂ ಕರಾವಳಿಯ ಹುಳಿ ಮಣ್ಣಿನ ಮೇಲೆ ಡೋಲೋಮೈಟ್’ ನ ಪ್ರಭಾವದ ಕುರಿತು ಕ್ಷೇತ್ರ ಪರಿಶೀಲನೆಯ ಕಾರ್ಯಕ್ರಮ

Suddi Udaya

ಮುಂಡಾಜೆ: ದಾಮೋದರ ಗೌಡ ನಿಧನ

Suddi Udaya

ಮುಂಡೂರು: ಮಳೆಗೆ ಮನೆ ಬಳಿ ಮಣ್ಣು ಕುಸಿತ, ಅಪಾಯದಂಚಿನಲ್ಲಿ ಮನೆ

Suddi Udaya

ಯಾವುದೇ ದಾಖಲಾತಿ ಇಲ್ಲದೆ ಅಕ್ರಮ ಮರಳು ಸಾಗಟ: ಪತ್ತೆ

Suddi Udaya
error: Content is protected !!