24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಬೈಕ್ ಗೆ ಕಾರು ಡಿಕ್ಕಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ಎಂಬಲ್ಲಿ ಬೈಕ್ ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಫೆ.7ರಂದು ವರದಿಯಾಗಿದೆ.

ಧರ್ಮಸ್ಥಳ ನಿವಾಸಿ ಚೇತನ್ ಎನ್.(26ವ) ಎಂಬವರ ದೂರಿನಂತೆ, ಫೆ. 07 ರಂದು ರಾತ್ರಿ KA 70 E 9952 ನೇ ಮೋಟಾರು ಸೈಕಲ್ ನ್ನು(ಬೈಕ್) ಅದರ ಸವಾರ ಸುಂದರ ಬಂಗೇರಾ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ಎಂಬಲ್ಲಿಗೆ ತಲುಪುತ್ತಿದ್ದಂತೆ KA 13 B 4788 ನೇ ಕಾರನ್ನು, ಅದರ ಚಾಲಕ ಪ್ರಕಾಶ್(46) ಎಂಬವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು, ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್ ಸವಾರ ಸುಂದರ ಬಂಗೇರಾ ರವರು ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು ಗಾಯಗೊಂಡವರನ್ನು, ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 15/2024 ಕಲಂ: 279,338 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಹತ್ಯಡ್ಕ ಪ್ರಾ.ಕೃ.ಪ.ಸ.ಸಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಸೇವಾ ನಿವೃತ್ತಿ

Suddi Udaya

ಡಾ| ವೈ.ಉಮಾನಾಥ ಶೆಣೈಯವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

Suddi Udaya

ಮಡಂತ್ಯಾರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮ

Suddi Udaya

ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಹುದ್ದೆಗೆ ಗೇರುಕಟ್ಟೆಯ ಹಿದಾಯತುಲ್ಲಾ ಕೆ.ಎ ಆಯ್ಕೆ

Suddi Udaya

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ಹೊಸಂಗಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya
error: Content is protected !!