ನಾರಾವಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ನಾರಾವಿ: ನಾರಾವಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮಸಭೆಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ರಂಜಿತ್ ಕುಮಾರ್ ಉತ್ತಮವಾಗಿ ನಡೆಸಿಕೊಟ್ಟರು.

ತಾತ್ಕಾಲಿಕವಾಗಿ ಸ್ವಚ್ಚತಾಗಾರರ ಕೂಲಿ ಪಾವತಿ 125200 ಮೊತ್ತ ನೀಡುತ್ತಿರುವುದು ಜಾಸ್ತಿಯಾಗಿದೆ ಎಂದು ಗ್ರಾಮಸ್ಥರೊರ್ವರು ಪ್ರಶ್ನಿಸಿದರು.‌ ಪ.ಅ.ಅಧಿಕಾರಿ ಸ್ವಚ್ಚತೆ ಮುಖ್ಯವಾಗಿರುವುದರಿಂದ ಪಾವತಿ ಮಾಡಲೇಬೇಕಾಗುತ್ತದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಖಾಯಂ ಲ್ಯಾಬ್ ಟೆಕ್ನಿಷಿಯನ್ ನೇಮಕಕ್ಕೆ ಗ್ರಾಮಸ್ಥರ ಒತ್ತಾಯಿಸಿದರು. ಆರೋಗ್ಯ ಇಲಾಖೆಯ ಕುತ್ಲೂರು ಉಪಕೇಂದ್ರಕ್ಕೆ 10 ಸೆಂಟ್ಸ್ ಜಾಗವಿದ್ದು ಕಟ್ಟಡ ನಿರ್ಮಿಸಲು ಗ್ರಾಮಸ್ಥರು ಒತ್ತಾಯಿಸಿದರು. ನಾರಾವಿ ಆರೋಗ್ಯ ಕೇಂದ್ರಕ್ಕೇ ಖಾಯಂ ವ್ಯದ್ಯರು ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಉದಯ ಹೆಗ್ಡೆ,ಆಶಾಲತಾ,ಮಲ್ಲಿಕಾ,ನಾರಾಯಣ ಪೂಜಾರಿ,ಸಂತೋಷ್ ಮರ್ದೋಟ್ಟು,ಸುದರ್ಶನ ಹೆಗ್ಡೆ,ಯಶೋಧ,ಮೀನಾ,ಡಯಾನ ಪ್ರಮೀಳಾ ರೊಡ್ರಿಗಸ್,ವಸಂತ, ನಾರಾವಿ ಸಿಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಯೋಗೀನಿ ಶೆಟ್ಟಿ ಅನುಪಾಲನಾ ವರದಿ ಸಭೆಯ ಮುಂದಿಟ್ಟರು. ಜಮಾ ಖರ್ಚಿನ ವಿವರವನ್ನು ಪಂಚಾಯತ್ ಸಿಬ್ಬಂದಿ ತಿಳಿಸಿದರು. ತಾಲೂಕು ಹಾಗೂ ಗ್ರಾಮ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸವಲತ್ತು ಹಾಗೂ ಮಾಹಿತಿ ನೀಡಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು,ಗ್ರಾಮಸ್ಥರು ಸಹಕರಿಸಿದರು.

Leave a Comment

error: Content is protected !!