ನಾಲ್ಕೂರು: ಇಲ್ಲಿಯ ಹುಂಬೆಜೆ ಪಲ್ಕೆಯಲ್ಲಿ ನಡೆಯುವ ವರ್ಷಂಪ್ರತಿ ಜರಗುವ ದೊಂಪದ ಬಲಿ ಮತ್ತು ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಬೋವಾಡಿಯಲ್ಲಿ ನಡೆಯುವ ಶ್ರೀ ಕೊಡಮಣಿತ್ತಾಯ ನೇಮ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವವು ಫೆ.7 ಮತ್ತು 8ರಂದು ನಡೆಯಿತು.
ಫೆ.7ರಂದು ಬೆಳಿಗ್ಗೆ ಹುಂಬೆಜೆ ಪಲ್ಕೆಯಲ್ಲಿ ಸಾರಿ ಹಾಕುವುದು ಮತ್ತು ಕಬೆ ಮುಹೂರ್ತ, ಚೆಂಡು ಇತ್ಯಾದಿ, ಸಂಜೆ ನಾಲ್ಕೂರುಗುತ್ತು ಮನೆಯಿಂದ ಭಂಡಾರ ಹೊರಡುವುದು. ರಾತ್ರಿ ಹುಂಬೆಜೆಪಲ್ಕೆಯಲ್ಲಿ ಕಲಶ ಶುದ್ಧಿ, ಸಾರ್ವಜನಿಕ ಅನ್ನಸಂತರ್ಪಣೆ, ಮಹಮ್ಮಾಯಿ ಪ್ರತಿಷ್ಠೆ ಹಾಗೂ ಶ್ರೀ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ, ಕಲ್ಲುರ್ಟಿ, ಕಲ್ಕುಡ ದೈವಗಳ ನೇಮ ನಡೆಯಿತು.
ಫೆ.8ರಂದು ಸಂಜೆ ನಾಲ್ಕೂರುಗುತ್ತು ಮನೆಯಿಂದ ಭಂಡಾರ ಹೊರಟು. ಬೋವಾಡಿ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಪಂಚ ವರ್ಣ, ಸಾರ್ವಜನಿಕ ಅನ್ನಸಂತರ್ಪಣೆ, ಶ್ರೀ ಕೊಡಮಣಿತ್ತಾಯ, ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ ಜರುಗಿತು. ನೂರಾರು ಭಕ್ತರು ಭಾಗವಹಿಸಿದ್ದರು.
ನಿಟ್ಟಡ್ಕ ಜೋಗಿ ಪುರುಷರ ಬಳಗದಿಂದ ಕೊಡಮಣಿತ್ತಾಯ ದೈವಕ್ಕೆ ಬೆಳ್ಳಿಯ ಆಭರಣ ಸಮರ್ಪಣೆ ಮಾಡಲಾಯಿತು.
ಚಿತ್ರ: ನೇಸರ ಕಟ್ಟೆ