September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಿಯೋನ್ ಆಶ್ರಮದ ಸ್ಥಾಪಕ ಡಾ. ಯು.ಸಿ. ಪೌಲೋಸ್‌ರಿಗೆ ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ಅಭಿನಂದನಾ ಸಮಾರಂಭ

ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ಅಂತರಾಷ್ಟ್ರೀಯ ಸೀನಿಯರ್ ಛೇಂಬರ್‌ನ ರಾಷ್ಟ್ರದ ಜವಾಬ್ದಾರಿಯುತ ಹಾಗೂ ಕ್ರಿಯಾಶೀಲ ನಾಗರಿಕ ಪ್ರಶಸ್ತಿಗೆ ನಿಯೋಜಿಸಲ್ಪಟ್ಟ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಸ್ಥಾಪಕ ಡಾ. ಯು.ಸಿ ಪೌಲೋಸ್‌ರವರನ್ನು ಅವರ ಆಶ್ರಮದಲ್ಲಿ ಸೀನಿಯರ್ ಛೇಂಬರ್‌ನ ಸದಸ್ಯರು ಫಲ ಪುಷ್ಪ ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಅಧ್ಯಕ್ಷ ಪೃಥ್ವಿರಂಜನ್ ರಾವ್, ಸ್ಥಾಪಕಾಧ್ಯಕ್ಷ ಪ್ರಮೋದ್ ಆರ್. ನಾಯಕ್, ಪೂರ್ವಾಧ್ಯಕ್ಷ ಪಿ.ಪಿ. ಜೋಯ್, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಮೋಲ್ಸಿ ಜೋಯ್, ಸಿಯೋನ್ ಆಶ್ರಮದ ನಿರ್ದೇಶಕ ಮೇರಿ ಯು.ಪಿ., ಶೋಭಾ ಯು.ಪಿ. ಹಾಗೂ ಆಶ್ರಮದ ಎಲ್ಲಾ ನಿವಾಸಿಗಳು, ಕಾರ್ಯಕರ್ತರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಕ್ರಮಗಳಿಗೆ ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ರೂ.20 ಸಾವಿರ ಸಹಾಯಧನವನ್ನು ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರು ಹಸ್ತಾಂತರಿಸಿದರು.

Related posts

ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಲಕ್ಷ್ಮಣ ಉಪ್ಪಾರ ಕರ್ತವ್ಯಕ್ಕೆ ಹಾಜರು

Suddi Udaya

ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆ: ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ

Suddi Udaya

ಅತ್ತಾಜೆ ಮುಹಿಯುದ್ದೀನ್ ಅರಬಿಕ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Suddi Udaya

ದಿವ್ಯಾಂಗರ ಆಶಾಕಿರಣ ಕನ್ಯಾಡಿ ಸೇವಾ ಭಾರತಿಯ ನೂತನ ಕಾರ್ಯಾಲಯ ‘ಸೇವಾನಿಕೇತನ’ ಉದ್ಭಾಟನೆ

Suddi Udaya

ಬಳಂಜ ಅಭಿಮಾನಿ ಬಳಗದಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಾರ್ವಜನಿಕ ನುಡಿನಮನ

Suddi Udaya

ನಾಳ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya
error: Content is protected !!