ನಾವೂರು: ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ )ನಾವೂರು ಇದರ ವಾರ್ಷಿಕ ಮಹಾಸಭೆ ಯನ್ನು ಫೆ. 09 ರಂದು ನಾವೂರು ಪಂಚಾಯತ್ ನ ಕುಲಾಲ್ ಸಭಾಭವನದಲ್ಲಿ ನಡೆಸಲಾಯಿತು.
ಸಭೆಯು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿಜಯಶ್ರೀ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯು ಸಂಜೀವಿನಿ ಧ್ಯೇಯ ಗೀತೆಯೊಂದಿಗೆ ಆರಂಭಿಸಲಾಯಿತು. ಪಂಚಾಯತ್ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು, ದೀಪ ಬೆಳಗಿಸುವುದರ ಮೂಲಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ತಾಲೂಕು ವಲಯ ಮೇಲ್ವಿಚಾರಕರು ಜಯಾನಂದರವರು ಎನ್. ಆರ್. ಎಲ್. ಎಂ. ನ ಯೋಜನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು. ಒಕ್ಕೂಟ ವರದಿ ಮತ್ತು ಖರ್ಚು ವೆಚ್ಚವನ್ನು ಸಭೆಯಲ್ಲಿ ಎಮ್.ಬಿಕೆ ಸೇವಿತಾ ಇವರು ಮಂಡಿಸಿದರು. ನಂತರ ಆರೋಗ್ಯ ಇಲಾಖೆಯ ಗ್ರಾಮ ಸಂಯೋಜಕಿ ಮಮತಾ ಇವರು ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಉತ್ತಮ ಮಾಹಿತಿ ನೀಡಿದರು.
ಶಿವಾನಿ ಸಂಜೀವಿನಿ ಸಂಘದ ಸದಸ್ಯರ ಪುತ್ರ ಜೀವಿತ್ ವಿಶೇಷ ಚೇತನ ಮಕ್ಕಳ ರಾಜ್ಯ ಮಟ್ಟದ ಕ್ರೀಡಾ ಕೂಟದ 50 ಮೀಟರ್ ಓಟದಲ್ಲಿ 4 ನೇ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಒಕ್ಕೂಟ ವತಿಯಿಂದ ಸನ್ಮಾನಿಸಲಾಯಿತು. ಶಕ್ತಿ ಸಂಜೀವಿನಿ ಸಂಘದ ಸದಸ್ಯರಾದ ಶ್ರೀಮತಿ ಎವುಳಿನ ಸಂಜೀವಿನಿ ಸಂಘಕ್ಕೆ ಸೇರಿದ ನಂತರ ಸರಕಾರದ ಮಾಹಿತಿ ಸಿಗುತ್ತೆ ಸ್ವಉದ್ಯೋಗ ಮಾಡಲು ಪ್ರೇರಣೆ ಸಿಕ್ಕಿದೆ ಎಂದರು. ಶ್ರದ್ದಾ ಸಂಜೀವಿನಿ ಸಂಘದ ಸದಸ್ಯೆ ಲಲಿತ ಮಾತನಾಡಿ ಸಂಜೀವಿನಿ ಸಂಘದಿಂದ ಬಡತನ ನಿರ್ಮೂಲನೇ ಬಡವರನ್ನು ಆರ್ಥಿಕವಾಗಿ ಸಬಳರನ್ನಾಗಿ ಮಾಡುವುದು ಸ್ವಾವಲಂಬನೆಯನ್ನು ಕಲ್ಪಿಸಿ ಕೊಡುವುದು ಹಾಗೂ ಸಾಲ, ಬ್ಯಾಂಕ್ ವ್ಯವಹಾರ, ಹಣಕಾಸಿನ ನಿರ್ವಹಣೆ, ಸ್ವಉದ್ಯೋಗ ಮಾಡಲು ಪ್ರೇರಣೆ, ಮಹಿಳೆಯರು ಬಡ್ಡಿ ವ್ಯವಹಾರದ ಬಗ್ಗೆ ಲೆಕ್ಕಾಚಾರ ಹಾಕುವ ಮಟ್ಟಕ್ಕೆ ಬೆಳೆದಿದ್ದೇವೆ ಇದಕ್ಕೆ ಕಾರಣ ಸಂಜೀವಿನಿ ಸಂಘ ಆಗಿದೆ ಎಂದು ಖುಷಿಯನ್ನು ವ್ಯಕ್ತಿ ಪಡಿಸಿದರು.
ಪಂಚಾಯತ್ ಸದಸ್ಯೆ ವೇದಾವತಿ ಒಕ್ಕೂಟ ಚೆನ್ನಾಗಿ ನಡೆಯುತಿದೆ ಇನ್ನೂ ಮುಂದೆಯೂ ಒಕ್ಕೂಟ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮುಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಂಚಾಯತ್ನಲ್ಲಿ ಸಿಗುವ ಮಾಹಿತಿ ನೀಡಿದರು. ನಂತರ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಒಕ್ಕೂಟದ ನೂತನ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ಜತೆ ಕಾರ್ಯದರ್ಶಿ ಕೋಶಾಧಿಕಾರಿ, ಆಯ್ಕೆಯಾದರು.
ನೂತನ ಅಧ್ಯಕ್ಷರಿಗೆ ಹೂಗುಚ್ಛ ನಡವಳಿ ಕೊಡುದರ ಮೂಲಕ ಹಸ್ತಾಂತರ ಮಾಡಲಾಯಿತು. ಹಾಗೂ ನಿರ್ಗಮಿತ ಅಧ್ಯಕ್ಷರು ಪದಾಧಿಕಾರಿಗಳನ್ನು ಸ್ಮರಣಿಕೆ, ಹೂ ನೀಡಿ ಗೌರವಿಸಲಾಯಿತು. ಈ ಸಭೆಯಲ್ಲಿ 200 ಸದಸ್ಯರು ಭಾಗಿಯಾಗಿದ್ದರು. ಪಂಚಾಯತ್ ಸದಸ್ಯರು ಹಸೈನರ್ ಆಶಾ ಕಾರ್ಯಕರ್ತೆ, ಕೃಷಿ ಸಖಿ, ಪಶುಸಖಿ, ಬಿಸಿ ಸಖಿ, ಎಲ್.ಸಿ.ಆರ್ .ಪಿ ವಹಿಸಿದ್ದರು.
ವಲಯ ಮೇಲ್ವಿಚಾರಕರು ಸ್ವಚ್ಛತೆ ಗೀತಾ ಗಾಯನದ ಮೂಲಕ ಸದಸ್ಯರನ್ನು ರಂಜಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ನಿರೂಪಿಸಿದರು. ಎಲ್.ಸಿ.ಆರ್ .ಪಿ ಶ್ರೀಮತಿ ಜಯಂತಿ ಸ್ವಾಗತಿಸಿದರು. ಶ್ರೀಮತಿ ಲಲಿತ ಧನ್ಯವಾದವಿತ್ತರು.