ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಸುಮಾರು ರೂ.56 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಕಾಯ೯ಪಾಲಕ ಅಭಿಯಂತರರು, ಮುಖ್ಯ ಗುತ್ತಿಗೆದಾರರು ಹಾಗೂ ಸಹಾಯಕ ಇಂಜಿನಿಯರ್ ಗಳು ಫೆ.10 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳ್ತಂಗಡಿಯಲ್ಲಿ ಈಗಿರುವ ಸೇತುವೆಯ ಇಕ್ಕೇಡೆಗಳಲ್ಲಿ ಸವೀ೯ಸ್ ರಸ್ತೆಗಳಿಗೆ ಎರಡು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರ ಬಳಿಕ ಈಗ ಇರುವ ಮುಖ್ಯ ಸೇತುವೆ ತೆಗೆದು ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಒಟ್ಟು ಮೂರು ಸೇತುವೆ ಆಗಲಿದೆ. ಇದಕ್ಕೆ ಬೇಕಾದ ಜಾಗವನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಇಂಜಿನಿಯರ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಇಲಾಖೆಯ ಮುಖ್ಯ ಕಾಯ೯ಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಮುಖ್ಯ ಗುತ್ತಿಗೆದಾರ ಡಿ.ಬಿ ಜೈನ್, ಸಿ.ಕಾಯ೯ಪಾಲಕ ಇಂಜಿನಿಯರ್ ಗಳಾದ ನಾಗರಾಜ್, ಮಹಾಬಲ ನಾಯ್ಕ, ಕೀರ್ತಿ ಅಮಿನ್ ಉಪಸ್ಥಿತರಿದ್ದರು.