ಫೆ.18: ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿಯಲ್ಲಿ ಪವಿತ್ರ ಶಿಲುಬೆಯ ಅವಶೇಷದ ಭವ್ಯ ಮೆರವಣಿಗೆ ಮತ್ತು ಪ್ರತಿಷ್ಠಾಪನ ಸಂಭ್ರಮ

Suddi Udaya

ನಡ: ಮಂಜೊಟ್ಟೆಯ ಹೋಲಿ ಕ್ರಾಸ್ ಚರ್ಚ್‌ ಆರಾಧ್ಯ ಪವಿತ್ರ ಶಿಲುಬೆಯ ಪುಣ್ಯ ಅವಶೇಷದ ಭವ್ಯ ಮೆರವಣಿಗೆ ಹಾಗೂ ಸಂಭ್ರಮವು ಫೆ.18 ರಂದು ಶ್ರದ್ಧಾ ಭಕ್ತಿಯಿಂದ ಜರುಗಲಿದೆ. ಈ ಪವಿತ್ರ ಶಿಲುಬೆಯ ಪುಣ್ಯ ಅವಶೇಷವು ನಮ್ಮ ಚರ್ಚ್‌ನ ಸದಸ್ಯರಾದ ವಿನ್ಸೆಂಟ್ ಪಿರೇರಾ ಮುಖಾಂತರ ಇಟಲಿ ದೇಶದಲ್ಲಿ ಕಾಪುಚಿನ್ ಪ್ರೊವಿನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಂದನೀಯ ಜೊಸ್ಸಿ ಫೆರ್ನಾಂಡೀಸ್ ಇವರ ಮೂಲಕ ಮಂಜೊಟ್ಟಿ ಚರ್ಚ್‌ಗೆ ದೊರಕಿದೆ. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನಾ ಅವರು ಈ ಅವಶೇಷವನ್ನು ಪ್ರತಿಷ್ಠಾಪಿಸಲು ಪರವಾನಿಗೆ ನೀಡಿದ್ದಾರೆ.

ಪವಿತ್ರ ಶಿಲುಬೆಯ ಅವಶೇಷದ ಮೆರವಣಿಗೆ: ಫೆ.18ರ ಭಾನುವಾರದಂದು ಪವಿತ್ರ ಶಿಲುಬೆಯ ಅವಶೇಷದ (ವಾಹನ) ಭವ್ಯ ಮೆರವಣಿಗೆಯು ಸಾಯಂಕಾಲ 4 ಗಂಟೆಗೆ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನಿಂದ ಪ್ರಾರಂಭಗೊಂಡು ಮಂಜೊಟ್ಟಿ ಹೋಲಿಕ್ರಾಸ್ ಚರ್ಚ್‌ಗೆ ಬರಲಿದೆ. ತದನಂತರ ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ವಾಲ್ಟರ್ ಡಿ ಮೆಲ್ಲೊ ಅವರು ದಿವ್ಯ ಬಲಿಪೂಜೆಯೊಂದಿಗೆ ಪುಣ್ಯ ಅವಶೇಷದ ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ.


ಧ್ಯಾನಕೂಟ: ಈ ದಿವ್ಯ ಸಂಭ್ರಮದ ಪೂರ್ವತಯಾರಿಯಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಧ್ಯಾನಕೂಟವನ್ನು ಫೆ.15ರಿಂದ 17ರ ವರೆಗೆ ಹೋಲಿ ಕ್ರಾಸ್ ಚರ್ಚಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ದಿವ್ಯ ಧ್ಯಾನಕೂಟವನ್ನು ಮದರ್‌ ಹೋಮ್ ರಿಟ್ರೇಟ್ ಸೆಂಟರ್ ಕಣ್ಣೂರು ಇದರ ಧರ್ಮಗುರುಗಳ ತಂಡ ನೆರವೇರಿಸಲಿದೆ. ಈ ಧ್ಯಾನ ಕೂಟವು ಸಾಯಂಕಾಲ 4 ಗಂಟೆಯಿಂದ 8ರ ವರೆಗೆ ನಡೆಯಲಿದ್ದು ಪ್ರತಿದಿನ ಸಾಯಂಕಾಲ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳ ನೇರ ಪ್ರಸಾರವನ್ನು Holy Cross Manjotti Yotube Channel ನಲ್ಲಿ ನೆರಪ್ರಸಾರ ಮಾಡಲಾಗುವುದು ಎಂದು ಹೋಲಿ ಕ್ರಾಸ್‌ಚರ್ಚ್‌ ನ ಧರ್ಮಗುರುಗಳಾದ ವಂದನೀಯ ಸ್ವಾಮಿ ಪ್ರವೀಣ್ ಡಿ’ಸೋಜ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Comment

error: Content is protected !!